Saturday, December 14, 2024
Homeರಾಷ್ಟ್ರೀಯ | Nationalಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ

ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ

ಬೆಂಗಳೂರು, ಜ.26- ಸಿನಿಮಾ ಹಾಗೂ ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2024ರ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸಿನಿಮಾ, ಕಲೆ, ವಿಜ್ಞಾನ, ಸಾಮಾಜಿಕ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಸಲುವಾಗಿ ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಯನ್ನು ಘೋಷಿಸಿದ್ದು 132 ಮಂದಿಗೆ ಈ ಗೌರವ ಸಂದಿದೆ. ಚಿರಂಜೀವಿ ಸೇರಿದಂತೆ 5 ಮಂದಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ್ ಹಾಗೂ 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಸಿನಿಮಾರಂಗವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ರಕ್ತದಾನ ಮತ್ತು ನೇತ್ರದಾನವನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದು, ಕೊರೊನಾ ಲಾಕ್‍ಡೌನ್ ವೇಳೆಯಲ್ಲಿ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಈ ಸೇವೆಯನ್ನು ಪರಿಗಣಿಸಿ ಚಿರುಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಅವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿತ್ತು.

ಕಾರಿನಲ್ಲಿ ಸರಸ-ಸಲ್ಲಾಪ : ಎಸ್ಐ ಹತ್ಯೆಗೆ ಯತ್ನಿಸಿದ ಯುವಕ-ಯುವತಿಗಾಗಿ ಶೋಧ

ಚಿರಂಜೀವಿ ಅಲ್ಲದೆ ತಮಿಳು ಚಿತ್ರರಂಗ ಹಿರಿಯ ನಟಿ ವೈಜಯಂತಿ ಬಾಲಿ ಹಾಗೂ ಖ್ಯಾತ ನೃತ್ಯಪಟು ಪದ್ಮಸುಬ್ರಮಣಿಯಂ ಅವರು ಕೂಡ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಾಲಿವುಡ್‍ನ ಖ್ಯಾತ ನಟ ಹಾಗೂ ರಾಜಕಾರಣಿ ಕ್ಯಾಪ್ಟನ್ ವಿಜಯ್ ಕಾಂತ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದರೆ, ಬಾಲಿವುಡ್‍ನ ಖ್ಯಾತ ನಟ ಮಿಥುನ್ ಚಕ್ರವರ್ತಿ, ಖ್ಯಾತ ಗಾಯಕಿ ಉಷಾ ಉತ್ತುಪ್, ಸಂಗೀತ ನಿರ್ದೇಶಕ ಪ್ಯಾರೆಲಲ್ ಶರ್ಮಾ ಅವರಿಗೂ ಪದ್ಮಭೂಷಣ ಪ್ರಶಸ್ತಿ ಸಂದಿದೆ.

RELATED ARTICLES

Latest News