Sunday, April 28, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-01-2024)

ನಿತ್ಯ ನೀತಿ : ಲಾಭವಿದೆ ಎಂದರೆ ಶತ್ರು ಕೂಡ ಮಿತ್ರನಾಗುತ್ತಾನೆ. ನಷ್ಟವಾಗುತ್ತೆ ಅಂತ ಗೊತ್ತಾದರೆ ಮಿತ್ರ ಕೂಡ ಶತ್ರುವಾಗುತ್ತಾನೆ. ಇದೇ ಪ್ರಪಂಚ.

ಪಂಚಾಂಗ ಶುಕ್ರವಾರ 26-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪುಷ್ಯ / ಯೋಗ: ಪ್ರೀತಿ / ಕರಣ: ಬಾಲವ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.18
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಸಾಲ ಮರುಪಾವತಿ ಮಾಡುವಿರಿ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ.
ವೃಷಭ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಮಿಥುನ: ಪೋಷಕರು ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸುವುದು ಸೂಕ್ತ.

ಕಟಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಸಿಂಹ: ಹೆಜ್ಜೆಹೆಜ್ಜೆಗೂ ಶತ್ರು ಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.
ಕನ್ಯಾ: ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.

ತುಲಾ: ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ಇರಲಿದೆ.

ವೃಶ್ಚಿಕ: ಶತ್ರುಗಳ ಕಾಟ ಹೆಚ್ಚಾಗಲಿದೆ.ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.
ಧನುಸ್ಸು: ನಂಬಿದ ಜನರಿಂದ ಮೋಸ ಹೋಗುವಿರಿ. ಕೆಲಸ-ಕಾರ್ಯಗಳಿಗೆ ವಿಘ್ನ ಎದುರಾಗಲಿದೆ.
ಮಕರ: ಇತರರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಂದ ಪ್ರಶಂಸೆ ಪಡೆಯುವಿರಿ.
ಕುಂಭ: ಉದ್ಯೋಗದಲ್ಲಿ ಆಸಕ್ತಿ ಉಂಟಾಗಲಿದೆ. ಅನಿರೀಕ್ಷಿತ ಧನಾಗಮನವಾಗಲಿದೆ.
ಮೀನ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಒಳಿತು.

RELATED ARTICLES

Latest News