ಪದ್ಮವಿಭೂಷಣ ಬಯಸದೆ ಬಂದ ಭಾಗ್ಯ : ಎಸ್.ಎಂ.ಕೃಷ್ಣ

ಬೆಂಗಳೂರು,ಜ.26- ಪದ್ಮವಿಭೂಷಣ ಪ್ರಶಸ್ತಿ ನನಗೆ ಬಯಸದೆ ಬಂದ ಭಾಗ್ಯ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರು ಬಣ್ಣಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಸುಮಾರು ಆರು ದಶಕಗಳ ಕಾಲ ನಾನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರದ ವಿದೇಶಾಂಗ ವ್ಯವಹಾರ, ವಿಧಾನಸಭೆಯ ಸಭಾಧ್ಯಕ್ಷ ಸೇರಿದಂತೆ ವಿವಿಧ ಸಚಿವ ಸ್ಥಾನದ ಖಾತೆಗಳನ್ನು ನಿಭಾಯಿಸಿದ ತೃಪ್ತಿ ನನಗಿದೆ ಎಂದು ಹೇಳಿದರು. ರಾಜಕೀಯ ಕ್ಷೇತ್ರದಲ್ಲಿ ನಾನೇನು ದೊಡ್ಡ ಸಾಧನೆ ಮಾಡಿಲ್ಲ. ಜನರ ಆಶೀರ್ವಾದಿಂದ ಸಿಕ್ಕ ಅಧಿಕಾರವನ್ನು […]