ಮುಂಬೈ, ಜ 27 (ಪಿಟಿಐ) – ಮಹಾರಾಷ್ಟ್ರ ಸರ್ಕಾರವು ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದೆ ಎಂದು ಹೇಳುವ ಮೂಲಕ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಹೇಳಿದ್ದಾರೆ. ಮರಾಠರ ಎಲ್ಲ ಬಂಧುಗಳ ದಾಖಲೆ (ಕುಂಬಿ ಜಾತಿಗೆ ಸಂಬಂಧ) ಪತ್ತೆಯಾದವರಿಗೆ ಕುಂಬಿ ಜಾತಿ ಪ್ರಮಾಣ ಪತ್ರ ನೀಡಲು ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನೆರೆಯ ನವಿ ಮುಂಬೈನ ವಾಶಿಯಲ್ಲಿ ಅವರು ಈ ಘೋಷಣೆ ಮಾಡಿದರು, ನಿನ್ನೆ ಬೆಳಿಗ್ಗೆ ಸ್ಥಳಕ್ಕೆ ತಲುಪಿದ ನಂತರ ಸಾವಿರಾರು ಬೆಂಬಲಿಗರೊಂದಿಗೆ ರಾತ್ರಿಯಿಡೀ ಅವರು ಹೋರಾಟದ ರೂಪುರೇಷೆ ಸಿದ್ದಪಡಿಸಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಜಾರಂಗೆ ಅವರನ್ನು ಭೇಟಿ ಮಾಡಿ ಮರಾಠ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ ನಂತರ ಮರಾಠ ಮೀಸಲಾತಿ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ.
ಬ್ರೇಕಿಂಗ್ : ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಪಟ್ಟ, ಮೊದಲ ಪಟ್ಟಿ ಬಿಡುಗಡೆ
ಮೀಸಲಾತಿಯ ಪ್ರಯೋಜನ ಇಡೀ ಸಮುದಾಯಕ್ಕೆ ಲಭ್ಯವಾಗುವವರೆಗೆ ಎಲ್ಲಾ ಮರಾಠರನ್ನು ಸೇರಿಸಲು ಸರ್ಕಾರ ತನ್ನ ಉಚಿತ ಶಿಕ್ಷಣ ನೀತಿಯನ್ನು ತಿದ್ದುಪಡಿ ಮಾಡಬೇಕೆಂದು ಜಾರಂಗೆ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದರು.
ರಾಜ್ಯ ಸರ್ಕಾರ ನೀಡಿರುವ 37 ಲಕ್ಷ ಕುಂಬಿ ಪ್ರಮಾಣಪತ್ರಗಳ ದತ್ತಾಂಶ ಕೇಳಿದ್ದಾರೆ. ಕುಂಬಿ, ಕೃಷಿಕ ಸಮುದಾಯವು ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರುತ್ತದೆ ಮತ್ತು ಜರಂಗೆ ಅವರು ಎಲ್ಲಾ ಮರಾಠರಿಗೆ ಕುಂಬಿ ಪ್ರಮಾಣಪತ್ರಗಳನ್ನು ಕೋರಿದ್ದರು.