Saturday, May 11, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2024)

ನಿತ್ಯ ನೀತಿ : ಅನೇಕ ಸಮಸ್ಯೆಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಜಗತ್ತು ಬೆಳೆಯುವುದೂ ನಿಂತಿಲ್ಲ. ಏಕೆಂದರೆ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲಿಷ್ಠವಾಗಿದೆ.

ಪಂಚಾಂಗ ಶನಿವಾರ 27-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಆಶ್ಲೇಷಾ / ಯೋಗ: ಆಯು / ಕರಣ: ತೈತಿಲ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.18
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಕಚೇರಿಯಲ್ಲಿ ಹಿರಿಯರಿಂದ ಪ್ರಶಂಸೆ ಸಿಗಲಿದೆ. ಆಪ್ತಮಿತ್ರನ ಹಠಾತ್ ಭೇಟಿಯಾಗಲಿದೆ.
ವೃಷಭ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು.
ಮಿಥುನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.

ಕಟಕ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಸಿಂಹ: ಲೇವಾದೇವಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ.
ಕನ್ಯಾ: ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರು ಸೋಲು ಒಪ್ಪಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ.

ತುಲಾ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.
ವೃಶ್ಚಿಕ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ.
ಧನುಸ್ಸು: ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.

ಮಕರ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಕುಂಭ: ಸಂಗಾತಿಯ ಅನಾರೋಗ್ಯದ ಸಮಸ್ಯೆ ಕಾಡಲಿದೆ. ಶತ್ರುಗಳ ಕಾಟ.
ಮೀನ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.

RELATED ARTICLES

Latest News