Saturday, November 23, 2024
Homeಸಂಪಾದಕೀಯ-ಲೇಖನಗಳುಅಣುಬಾಂಬ್ ಸಾಮರ್ಥ್ಯದಿಂದ ಭಾರತಕ್ಕೆ ಜಾಗತಿಕ ಭೂಪಟದಲ್ಲಿ ಸ್ಥಾನ ಕಲ್ಪಿಸಿದ ಕನ್ನಡಿಗ ರಾಜಾರಾಮಣ್ಣ

ಅಣುಬಾಂಬ್ ಸಾಮರ್ಥ್ಯದಿಂದ ಭಾರತಕ್ಕೆ ಜಾಗತಿಕ ಭೂಪಟದಲ್ಲಿ ಸ್ಥಾನ ಕಲ್ಪಿಸಿದ ಕನ್ನಡಿಗ ರಾಜಾರಾಮಣ್ಣ

ಅಣುಬಾಂಬ್ ಸಾಮಥ್ರ್ಯದಿಂದ ಭಾರತಕ್ಕೆ ಜಾಗತಿಕ ಭೂಪಟದಲ್ಲಿ ಸ್ಥಾನ ಕಲ್ಪಿಸಿ, ರಾಷ್ಟ್ರದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಮಹಾನ್ ವಿಜ್ಞಾನಿ ಕನ್ನಡಿಗ ರಾಜಾರಾಮಣ್ಣ. ಅಮೇರಿಕಾದ ಸಾರ್ವಭೌಮತ್ವ, ಚೀನಾ, ಪಾಕಿಸ್ಥಾನಗಳ ವೈರತ್ವ ಈ ಎಲ್ಲದರ ಸುಳಿಯಲ್ಲಿ ಭಾರತಕ್ಕೆ ಬಲತುಂಬಲು, ಭಾರತದ ಶಕ್ತಿಯನ್ನು ಜಾಗತಿಕವಾಗಿ ಪ್ರದರ್ಶಿಸಲು ರಾಜಾರಾಮಣ್ಣ ಮತ್ತಿತರ ಅಣು ವಿಜ್ಞಾನಿಗಳ ಶ್ರಮ ಗಣನೀಯ.ಇಂದು ಅವರ ಜನ್ಮದಿನ ಇದಕ್ಕೆ ಇಡೀ ದೇಸ ನಮನ ಸಲ್ಲಿಸುತ್ತಿದೆ.

ರಾಜಾಸ್ಥಾನದ ಪೋಖ್ರಾನ್‍ನಲ್ಲಿ 1974 ರಲ್ಲಿ ನಡೆಸಿದ ಪ್ರಪ್ರಥಮವಾಗಿ ಅಣುಪರೀಕ್ಷೆಯ ರೂವಾರಿಯಾಗಿದ್ದ ರಾಜಾ ರಾಮಣ್ಣ. ಆ ಮೂಲಕ ಭಾರತದ ರಕ್ಷಣಾ ವಿಭಾಗಕ್ಕೆ ಆತ್ಮವಿಶ್ವಾಸ ಮೂಡಿಸಿದರು. ರಾಜಾರಾಮಣ್ಣನವರಂಥ ವಿಜ್ಞಾನಿಗಳು ಭಾರತದಲ್ಲಿ ಬಹುಮಂದಿಯಿಲ್ಲ . ವಿಜ್ಞಾನಿಗಳಾದವರು ಸಾಂಸ್ಕøತಿಕ ಲೋಕದಿಂದ ದೂರವಿರುವುದು ಮಾಮೂಲಿ. ರಾಜಾರಾಮಣ್ಣ ಈ ಮಾತಿಗೆ ಅಪವಾದವಾಗಿದ್ದರು. ಅವರ ಪ್ರತಿಭೆ ವಿಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿರಲಿಲ್ಲ. ಅವರು ಬಹು ಮುಖ ಪ್ರತಿಭೆಯ ಅದು ಬಹುಜನರಿಗೆ ಗೊತ್ತಿಲ್ಲ.

ಅಣು ವಿಜ್ಞಾನಿಯಾಗಷ್ಟೇ ಪರಿಚಿತರಾಗಿದ್ದ ಅವರು ಒಳ್ಳೆಯ ಪಿಯಾನೋ ವಾದಕರೂ ಹೌದು. ಸಂಗೀತದ ಬಗೆಗೆ ಅಪಾರ ಆಸಕ್ತಿ ಹೊಂದಿದ್ದರು, ಪಿಯಾನೋ ನುಡಿಸುವುದೆಂದರೆ ಪ್ರಾಣ. ಅದನ್ನವರು ತಮ್ಮ ಆರನೇ ವಯಸ್ಸಿನಲ್ಲಿಯೇ ಆರಂಭಿಸಿದ್ದರು. ಮಂಗಳೂರು ಗಣರಾಜ್ಯೋತ್ಸವಕ್ಕೆ ಮೆರಗು ತಂದಿದ್ದರು.

ಬಾಬಾ ಪರಮಾಣು ಅಧ್ಯಯನ ಕೇಂದ್ರದಲ್ಲಿ , ಅಟೋಮಿಕ್ ಎನರ್ಜಿ ಕಮೀಷನ್‍ನಲ್ಲಿ ಮುಖ್ಯಸ್ಥರಾಗಿ ಅವರು ಪರಮಾಣು ಶಕ್ತಿ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ಅನನ್ಯ. ರಕ್ಷಣಾ ಸಚಿವಾಲಯದ ವಿಜ್ಞಾನ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ರಾಜಾರಾಮಣ್ಣ ಒಬ್ಬ ಶ್ರೇಷ್ಠ ಲೇಖಕರು ಹೌದು. ಅಣು ವಿಜ್ಞಾನಿಯಾಬ್ಬರು ಸಂಗೀತದಲ್ಲಿ ವಿಶೇಷ ಪಾಂಡಿತ್ಯ ಹೊಂದಿ, ದಿ ಸ್ಟ್ರಕ್ಚರ್ ಆಫ್ ಮ್ಯುಸಿಕ್ ಇನ್ ವೆಸ್ಟ್ರನ್ ಸಿಸ್ಟಮ್ ಎನ್ನುವ ಸಂಗೀತದ ಪುಸ್ತಕ ರಚಿಸುವುದು ವಿಶೇಷವೇ ಸರಿ.

ಇಯರ್ಸ್ ಆಫ್ ಪಿಲಿಗ್ರಿಮೇಜ್ ಎನ್ನುವುದು ಇವರ ಆತ್ಮಚರಿತ್ರೆಯಲ್ಲಿ ಹಲವು ಕುತೂಹಲ ವಿಷಯ ತಿಳಿಯುತ್ತದೆ.ಕ್ರಿಯಾಶೀಲರಾಗಿದ್ದ ರಾಜಾರಾಮಣ್ಣ ತಮ್ಮ 79ನೇ ವಯಸ್ಸಿನಲ್ಲಿಯೂ, ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅದ್ವಾನ್ಸಡ್ ಸ್ಟಡೀಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರು ರಾಜಾರಾಮಣ್ಣನವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು . ಇವರ ಸೇವೆಯನ್ನು ಗುರ್ತಿಸಿ ಭಾರತ ಸರಕಾರ ಪದ್ಮಭೂಷಣ, ಪದ್ಮ ವಿಭೂಷಣ ಮತ್ತಿತರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ರಾಜಾರಾಮಣ್ಣನವರು 1925ರ ಜನವರಿ 28ರಂದು ತುಮಕೂರಿನಲ್ಲಿ ಜನಿಸಿದರು. ಮದ್ರಾಸಿನಲ್ಲಿ ಬಿ.ಎಸ್ಸಿ (ಆನರ್ಸ್) ಪದವಿ ಪಡೆದ ನಂತರ 1945ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ ಅಭ್ಯಾಸ ಮಾಡಿ 1949ರಲ್ಲಿ ಪಿಎಚ್.ಡಿ. ಪಡೆದರು. ತದನಂತರ ಭಾರತಕ್ಕೆ ಮರಳಿದ ರಾಜಾರಾಮಣ್ಣನವರು ಹೋಮಿ ಜಹಂಗೀರ್ ಭಾಬಾರವರೊಡನೆ ಕೆಲಸ ಮಾಡತೊಡಗಿದರು.

ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ದಿಗಾಗಿ ಶ್ರಮಿಸಿದ ರಾಜಾರಾಮಣ್ಣನವರು, ನ್ಯೂಕ್ಲಿಯರ್ ಫಿಜನ್ ವಿಷಯದಲ್ಲಿ ಆಳವಾದ ಸಂಶೋಧನೆ ಕೈಗೊಂಡರು.ರಾಜಾರಾಮಣ್ಣನವರು 1972-1978 ಹಾಗೂ 1981-83 ಅವ„ಗಳಲ್ಲಿ ¿ಭಾಬಾ ಅಣು ಸಂಶೋಧನಾ ಕೇಂದ್ರ¿ದ ನಿರ್ದೇಶಕರಾಗಿದ್ದರು. ರಾಜಾರಾಮಣ್ಣನವರು ರಕ್ಷಣಾ ಮಂತ್ರಾಲಯದ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಢಿ ಸಂಸ್ಥೆಯ (ಡಿ.ಆರ್.ಡಿ.ಒ) ಮಹಾ ನಿರ್ದೇಶಕರಾಗಿ ಹಾಗೂ ರಕ್ಷಣಾ ಸಂಶೋಧನ ಕಾರ್ಯದರ್ಶಿಗಳಾಗಿ ಹೀಗೆ 3 ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿದ್ದರು. 1983ರಿಂದ ಪ್ರಾರಂಭಗೊಂಡಂತೆ ಅಣು ಶಕ್ತಿ ಆಯೋಗ (ಎ.ಇ.ಸಿ) ಹಾಗೂ ಭಾರತ ಸರ್ಕಾರದ ಅಣು ಶಕ್ತಿ ವಿಭಾಗದ(ಡಿ.ಎ.ಇ) ಕಾರ್ಯದರ್ಶಿ ಹುದ್ದೆಯನ್ನು ಸಹ ಅಲಂಕರಿಸಿ 1987ರಲ್ಲಿ ನಿವೃತ್ತರಾದರು.

ದಯಾಮರಣ ಕೋರಿ ಸುಪ್ರೀಂ ಮೆಟ್ಟಿಲೇರಲು ಸಿದ್ದವಾದ ಕೇರಳ ಕುಟುಂಬ

ತಮ್ಮ ನಿವೃತ್ತಿಯ ನಂತರದಲ್ಲಿ ರಾಜಾರಾಮಣ್ಣನವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಪ್ರೌಢ ಅಧ್ಯಯನ ಸಂಸ್ಥೆಯ (ಎನ್.ಐ.ಎ.ಎಸ್) ಅಧ್ಯಕ್ಷರಾಗಿ 1987ರಿಂದ 1989ರ ವರೆಗೆ ದುಡಿದರು. ಅವರ ಅಂತಿಮ ದಿನಗಳವರೆಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ಸಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಈ ಮಧ್ಯೆ 1990ರಲ್ಲಿ ರಾಜಾರಾಮಣ್ಣನವರು ವಿ.ಪಿ ಸಿಂಗ್ ಅವರ ಸಂಪುಟದಲ್ಲಿ ಕೆಲಕಾಲ ರಕ್ಷಣಾ ರಾಜ್ಯ ಸಚಿವರೂ ಆಗಿದ್ದರು. 1997ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ರಾಜಾರಾಮಣ್ಣನವರು ಭಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆಯ ಕೀರ್ತಿಗೆ ಭಾಜನರಾಗಿದ್ದಾರೆ. ಪೆÇಕ್ರಾನ್-1 ಅಥವಾ ಆಪರೇಷನ್ ಸ್ಮೈಲಿಂಗ್ ಬುದ್ಧ ಎಂದು ಕರೆಯಲಾದ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗೂ ಯಶಸ್ವಿಯಾಗಿ ನಡೆಸಿದ ಸಾಧನೆ ರಾಜಾರಾಮಣ್ಣನವರ ಶಕ್ತಿಸಾಮಾಥ್ರ್ಯಗಳ ಹಿರಿಮೆಗೆ ಸಾಕ್ಷಿಯೆನಿಸಿದೆ.

ಈ ಮಹಾನ್ ಸಾಧಕರಾದ ರಾಜಾರಾಮಣ್ಣನವರು ಸೆಪ್ಟೆಂಬರ್ 24, 2004ರಂದು ಮುಂಬೈನಲ್ಲಿ ನಿಧನರಾದರು.ಈ ಮಹಾನ್ ಸಾಧಕ, ವಿಜ್ಞಾನಿ, ವಿದ್ವಾಂಸ ರಾಜಾ ರಾಮಣ್ಣ ಎಂಬ ಮಹಾನ್ ಚೇತನಕ್ಕೆ ನಮ್ಮ ನಮನ.

RELATED ARTICLES

Latest News