Saturday, November 23, 2024
Homeರಾಷ್ಟ್ರೀಯ | Nationalಲೋಕಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ದಿಗ್ವಿಜಯ್‍ಸಿಂಗ್

ಲೋಕಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ದಿಗ್ವಿಜಯ್‍ಸಿಂಗ್

ರಾಜ್‍ಗಢ,ಜ.29- ಮಧ್ಯಪ್ರದೇಶದ ಕಾಂಗ್ರೆಸ್‍ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸುವುದನ್ನು ತಳ್ಳಿಹಾಕಿದ್ದಾರೆ. ನಾನು ರಾಜ್ಯಸಭಾ ಸದಸ್ಯನಾಗಿರುವುದರಿಂದ ಮತ್ತು ಇನ್ನೂ ಎರಡು ವರ್ಷ (ರಾಜ್ಯಸಭಾ ಅಧಿಕಾರಾವಧಿ) ಉಳಿದಿರುವ ಕಾರಣ ಚುನಾವಣೆಯಲ್ಲಿ ಸ್ರ್ಪಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಂಗ್ ರಾಜ್‍ಗಢ್ ಜಿಲ್ಲೆಯ ಖಿಲ್ಚಿಪುರ್ ಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಗಮನಾರ್ಹವೆಂದರೆ, ಸಿಂಗ್ 2019 ರಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ರ್ಪಧಿಸಿದ್ದರು ಆದರೆ ಬಿಜೆಪಿಯ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ 3.65 ಲಕ್ಷ ಮತಗಳ ಅಂತರದಿಂದ ಸೋತಿದ್ದರು.

ರಾಜ್‍ಗಢ್ ಲೋಕಸಭಾ ಕ್ಷೇತ್ರವು ರಾಜ್‍ಗಢ್ ಸಂಸದೀಯ ಕ್ಷೇತ್ರದ ಅಡಿಯಲ್ಲಿ ಬರುವ ರಘೋಗಡ್ ಅಸೆಂಬ್ಲಿ ವಿಭಾಗದಿಂದ (ಗುಣ ಜಿಲ್ಲೆ) ಸಿಂಗ್ ಅವರ ತವರು ಕ್ಷೇತ್ರವಾಗಿದೆ. ಅವರು 1984 ಮತ್ತು 1991 ರಲ್ಲಿ ರಾಜ್‍ಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಬಿಜೆಪಿ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ : ಸಚಿವ ಖರ್ಗೆ ಕಿಡಿ

ಮಧ್ಯಪ್ರದೇಶದ ಒಟ್ಟು 29 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 28 ಮತ್ತು ಕಾಂಗ್ರೆಸ್ ಒಂದನ್ನು ಗೆದ್ದಿದೆ.
ಕಳೆದ ವರ್ಷ ನಡೆದ ಸಂಸದೀಯ ವಿಧಾನಸಭಾ ಚುನಾವಣೆಯಲ್ಲಿ ಸಿಂಗ್ ಮತ್ತು ಮತ್ತೋರ್ವ ಅನುಭವಿ ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು

RELATED ARTICLES

Latest News