Friday, May 3, 2024
Homeರಾಷ್ಟ್ರೀಯಬಿಹಾರ ಪ್ರವೇಶಿಸಿದ ರಾಹುಲ್ ನ್ಯಾಯಯಾತ್ರೆ

ಬಿಹಾರ ಪ್ರವೇಶಿಸಿದ ರಾಹುಲ್ ನ್ಯಾಯಯಾತ್ರೆ

ಪಾಟ್ನಾ,ಜ.29- ಇಂಡಿಯಾ ಮೈತ್ರಿಕೋಟದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೊರ ಬಂದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಬಿಹಾರವನ್ನು ಪ್ರವೇಶಿಸಿದೆ. ನ್ಯಾಯ ಯಾತ್ರೆಯು ಜನವರಿ 14 ರಂದು ಮಣಿಪುರದಲ್ಲಿ ಪ್ರಾರಂಭವಾಗಿ ಈಶಾನ್ಯದಲ್ಲಿ ಪ್ರಯಾಣಿಸಿದ ನಂತರ, ಗಾಂಧಿಯವರು ವಿರಾಮ ತೆಗೆದುಕೊಂಡು ದೆಹಲಿಗೆ ಬರುವ ಮೊದಲ ಬಿಹಾರದಲ್ಲಿ ಮಹಾಘಟ ಬಂಧನ್ ನೇತೃತ್ವದ ಸರ್ಕಾರವಿತ್ತು.

ಇಂದು ಬೆಳಗ್ಗೆ ಬಂಗಾಳದ ಉತ್ತರ ದಿನಾಜ್‍ಪುರ ಜಿಲ್ಲೆಯ ಸೋನಾಪುರದಲ್ಲಿ ಆರಂಭವಾದ ಯಾತ್ರೆ ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಹಾರದ ಕಿಶನ್‍ಗಂಜ್ ತಲುಪಿತು. ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ಕಿಶನ್‍ಗಂಜ್ ಲೋಕಸಭಾ ಕ್ಷೇತ್ರವು 2009 ರ ಲೋಕಸಭಾ ಚುನಾವಣೆಯಿಂದಲೂ ಕಾಂಗ್ರೆಸ್‍ನಲ್ಲಿದೆ. ರ್ಯಾಲಿ ನಾಳೆ ಪೂರ್ಣೆಯಾ ಮತ್ತು ಮರುದಿನ ಕತಿಹಾರ್‍ಗೆ ತೆರಳಲಿದೆ. ಎರಡೂ ಜಿಲ್ಲೆಗಳು ಜೆಡಿಯು ಭದ್ರಕೋಟೆಗಳಾಗಿದ್ದು, ಯಾತ್ರೆ ಆರಂಭವಾದಾಗ ಕಾಂಗ್ರೆಸ್ ಗೆ ದೋಸ್ತಿ ಕ್ಷೇತ್ರವಾಗಿತ್ತು. ಈಗ ಸಮೀಕರಣಗಳು ಬದಲಾಗಿವೆ.

ಬಿಜೆಪಿ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ : ಸಚಿವ ಖರ್ಗೆ ಕಿಡಿ

ಇದು 2020 ರ ವಿಧಾನಸಭಾ ಚುನಾವಣೆಯ ನಂತರ ಬಿಹಾರಕ್ಕೆ ರಾಹುಲ್ ಗಾಂಧಿಯವರ ಮೊದಲ ಭೇಟಿಯಾಗಿದೆ. 2020 ರ ಚುನಾವಣೆಯ ನಂತರ ಎನ್‍ಡಿಎ ಮೈತ್ರಿಕೂಟವು ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು. ಎರಡು ವರ್ಷಗಳ ನಂತರ, ಆಗಸ್ಟ್ 2022 ರಲ್ಲಿ ಕುಮಾರ್ ಎನ್‍ಡಿಎ ಮೈತ್ರಿಕೂಟದಿಂದ ಹೊರನಡೆದರು ಮತ್ತು ದೂರವಾದ ಮಿತ್ರಪಕ್ಷಗಳಾದ ಆರ್‍ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿದ್ದರೂ ಇದೀಗ ಅವರು, ಮತ್ತೊಮ್ಮೆ ಮಹಾಘಟ ಬಂಧನ್‍ನಿಂದ ಹೊರ ಬಂದು ಮತ್ತೇ ಎನ್‍ಡಿಎ ಮೈತ್ರಿಕೂಟ ಸೇರಿಕೊಂಡಿದ್ದಾರೆ.

ಬಿಹಾರದಲ್ಲಿ ಪಕ್ಷದ ಮೈತ್ರಿಕೂಟದ ಪಾಲುದಾರರಾದ ಆರ್‍ಜೆಡಿ ಮತ್ತು ಸಿಪಿಐ (ಎಂಎಲï)-ಎಲ್ ಅನ್ನು ಪೂರ್ಣೆ ರ್ಯಾಲಿಗೆ ಆಹ್ವಾನಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಬಿಹಾರದ ಯಾತ್ರೆಯ ಸಮಯದಲ್ಲಿ ಸಾರ್ವಜನಿಕ ಭಾಷಣದ ಸಮಯದಲ್ಲಿ ರಾಹುಲ್ ಗಾಂಧಿಯವರು ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಬಿಹಾರದ ಹಿನ್ನಡೆಗೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದೆ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿತೀಶ್ ಕುಮಾರ್ ಅವರನ್ನು ಆಯಾ ರಾಮ್ ಗಯಾ ರಾಮï ಎಂದು ಉಲ್ಲೇಖಿಸಿದ್ದಾರೆ – ಇದು ಪಕ್ಷಗಳನ್ನು ಬದಲಾಯಿಸುವ ರಾಜಕಾರಣಿಗಳಿಗೆ ಬಳಸಲಾಗುವ ಪದವಾಗಿದೆ.

RELATED ARTICLES

Latest News