ಬೆಂಗಳೂರು,ಜ.29- ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇತೃತ್ವದಲ್ಲಿ ಸಚಿವ ಸಂಪುಟ 18-01-2024ರಂದು ನಡೆದ ಸಚಿವ ಸಂಪುಟದಲ್ಲಿ ಮಾದಿಗೆ ಸಮುದಾಯ ಹೋರಾಟದ ಬೇಡಿಕೆಯಂತೆ ಸದಾಶಿವ ಆಯೋಗ ವರದಿ ಜಾರಿ ಮಾಡುವ ತೀರ್ಮಾನವನ್ನು ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಇದು ನಮ್ಮ ಹೋರಾಟಕ್ಕೆ ತಂದ ಜಯ ಮತ್ತು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಕೆ.ಪಿ.ಸಿ.ಸಿ ಸದಸ್ಯ ಏ. ಮುನಿಯಪ್ಪ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, 2023ನೇ ಸಾಲಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣೆ ಪುಣಾಳಿಕೆಯಲ್ಲಿ ದಲಿತ ಸಮುದಾಯದ ಹಲವು ದಶಕಗಳ ಹೋರಾಟದ ಬೇಡಿಕೆಯಂತೆ ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಸಮುದಾಯದ ಜನರಿಗೆ ಭರವಸೆ ನೀಡಲಾಗಿತ್ತು ಹಾಗೂ ಚಿತ್ರದುರ್ಗದ ದಲಿತರ ಏಕತಾ ಸಮಾವೇಶದಲ್ಲಿ ಒಳಮೀಸಲಾತಿಯನ್ನು ಕೇಂದ್ರ ಶಿಫಾರಸ್ಸು ಮಾಡುವುದಾಗಿ ಕಾಂಗ್ರೆಸ್ ಪಕ್ಷದ ದಲಿತ ಸಮುದಾಯಕ್ಕೆ ಸೇರಿದ ಎಲ್ಲಾ ಹಿರಿಯ ನಾಯಕರುಗಳ ನೇತೃತ್ವದಲ್ಲಿ ನಿರ್ಣಯ ಮಾಡಲಾಗಿತ್ತು.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷರಾದ ಜಿ. ಪರಮೇಶ್ವರ ರವರು, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪ ಹಿರಿಯ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರು ಸಚಿವರಾದ ಆರ್.ಬಿ. ತಿಮ್ಮಾಪೂರ ರವರು ಮತ್ತು ದಲಿತ ಸಮುದಾದ ಸಚಿವರುಗಳು, ಶಾಸಕರುಗಳು ಪುನರಾವರ್ತನಾ ಸಭೆಗಳನ್ನು ನಡೆಸಿ, ಸಮುದಾಯ ಜನರಿಗೆ ಮಾತು ಕೊಟ್ಟಿದ್ದೇವೆ ಸಂಘ-ಸಂಸ್ಥೆಗಳು ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಸರ್ಕಾರದ ಮೇಲೆ ಒತ್ತಡ ತರಲಾಯಿತು. ಇವರುಗಳ ಒತ್ತಡಕ್ಕೆ ಸ್ಪಂದಿಸಿದ ಈ ನಾಡಿನ ಸಾಮಾಜಿಕ ಕಳಕಳಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು, ಬಡವರ ಪರವಾಗಿ ಸ್ಪಂದನೆ ಮಾಡುವಂತಹ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಬೆಂಬಲದಿಂದ ಸಚಿವ ಸಂಪುಟದ ಎಲ್ಲಾ ಸದಸ್ಯರು ಕೈಜೋಡಿಸಿ, ಒಳಮೀಸಲಾತಿಯನ್ನು ನೀಡಲು ಸಂವಿಧಾನ ಅನುಚ್ಛೇಧ 341ಕ್ಕೆ ತಿದ್ದುಪಡಿ ಮಾಡಿ, 341(3)ವಿಧಿಗೆ ಹೊಸ ಷರತ್ತನ್ನು ಸೇರಿಸಲು ಶಿಫಾರಸ್ಸು ಮಾಡಿರುವುದು 30 ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು
ಜ್ಞಾನವ್ಯಾಪಿ ಸಮೀಕ್ಷೆ ವಿರೋಧಿಸುವವರು ತುಕ್ಡೆ ಗ್ಯಾಂಗ್‍ನ ಭಾಗವಾಗಿದ್ದಾರೆ : ಜಮಾಲ್
ಮಾದಿಗ ಮತ್ತು ಶೋಷಿತ ಸಮುದಾಯಗಳ ಹೋರಾಟಗಳನ್ನು ಗಮನಿಸಿದ 7 ಬಾರಿ ಸಂಸದ ಸದಸ್ಯರಾಗಿ ಆಯ್ಕೆ, ಕೇಂದ್ರದ ಎರಡು ಬಾರಿ ಸಚಿವರಾಗಿ ಕೆಲಸ ಮಾಡಿರುವ ಹಾಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರ ಒತ್ತಡ ಮೇರೆಗೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ರವರು ಮಾದಿಗೆ ಜನಾಂಗದ ಸಾಮಾಜಿಕ ನ್ಯಾಯಕ್ಕಾಗಿ ಸದಾಶಿವ ಆಯೋಗವನ್ನು ರಚಿಸಿದರು. ಕೆ.ಹೆಚ್. ಮುನಿಯಪ್ಪ ರವರು ದಲಿತ ಸಮುದಾಯ ಸಚಿವರು ಹಾಗೂ ಎಲ್ಲಾ ಜನಪ್ರತಿನಿಧಿಗಳ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಬೆಂಬಲ ಪಡೆದು, ಸರ್ಕಾರದ ಮೇಲೆ ಒತ್ತಡ ಹಾಕಿ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಕಾರಣೀಭೂತರಾದ ಕೆ.ಹೆಚ್. ಮುನಿಯಪ್ಪ ರವರಿಗೆ ಮಾದಿಗ ಸಮುದಾಯದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತೇವೆ ಎಂದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯದ ಬೆಳವಣಿಗೆಯ ಉದ್ದೇಶದಿಂದ ಕ್ಯಾಬಿನೆಟ್ ನಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಂಡ ಒಳ ಮೀಸಲಾತಿಯ ವರ್ಗೀಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗಿದೆ ಇವರೆಲ್ಲರಿಗೂ ಧನ್ಯವಾದಗಳು ಎಂದರು ದಲಿತ ಮುಖಂಡರಾದ ಕೆ. ರಾಜಶೇಖರ್, ಎಂ.ಸಿ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.