Saturday, May 4, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2024)

ನಿತ್ಯ ನೀತಿ: ಕಾಯಬೇಕು ಒಳ್ಳೆಯ ದಿನಕ್ಕೆ. ಕುಗ್ಗಬಾರದು ಯಾವುದೇ ಕಾರಣಕ್ಕೆ. ಗೆಲುವು ಒಳ್ಳೆಯತನಕ್ಕೆ. ತಲೆ ಬಾಗಬೇಡ ನೋವಿನ ಆಟಕ್ಕೆ. ಗುರಿಯೇ ರೆಕ್ಕೆಯ ಜೀವನಕ್ಕೆ. ಅಳದಿರು ಹೆದರಿ ಬದುಕಿನ ಪಾಠಕ್ಕೆ.

ಪಂಚಾಂಗ ಮಂಗಳವಾರ 30-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಅತಿಗಂಡ / ಕರಣ: ಕೌಲವ

ಸೂರ್ಯೋದಯ ; ಬೆ.06.46
ಸೂರ್ಯಾಸ್ತ : 06.20
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಸ್ವಂತಿಕೆ ಬಿಟ್ಟು ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುವುದು ಅನಿವಾರ್ಯ.
ವೃಷಭ: ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗರೂಕ ರಾಗಿರಬೇಕು. ಮನೆಯವರೊಂದಿಗೆ ಸಮಯ ಕಳೆಯಿರಿ.
ಮಿಥುನ: ಚಿಂತನೆಯಿಂದ ವರ್ತಿಸುವ ಮೂಲಕ ಎಲ್ಲರನ್ನೂ ಗೌರವಿಸುವುದು ಒಳಿತು.

ಕಟಕ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು.ಆಹಾರದ ಕಡೆ ಗಮನ ನೀಡಿ.
ಸಿಂಹ: ಕಚೇರಿ ಕೆಲಸ – ಕಾರ್ಯಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.

ಕನ್ಯಾ: ಅನೇಕ ವಿಧದ ಜನರು ನಿಮ್ಮ ಬಳಿ ಆಶ್ರಯಕ್ಕಾಗಿ ಬರುವರು.
ತುಲಾ: ತಂದೆಯ ಬೆಂಬಲದೊಂದಿಗೆ, ಭೂಮಿ ಮತ್ತು ಆಸ್ತಿಯ ಲಾಭ ಪಡೆಯಬಹುದು.
ವೃಶ್ಚಿಕ: ಮನೋಸ್ಥೈರ್ಯ ಅಧಿಕವಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ರ್ಯನಿರ್ವಹಿಸಬಹುದು.

ಧನುಸ್ಸು: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.
ಮಕರ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಕುಂಭ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.
ಮೀನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.

RELATED ARTICLES

Latest News