Sunday, April 28, 2024
Homeಅಂತಾರಾಷ್ಟ್ರೀಯಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾವು

ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾವು

ವಾಷಿಂಗ್ಟನ್, ಜ.30-ಕಳೆದ ಭಾನುವಾರ ನಾಪತ್ತೆಯಾಗಿದ್ದ ಅಮೆರಿಕದ ಇಂಡಿಯಾನಾ ರಾಜ್ಯದ ಪ್ರತಿಷ್ಠಿತ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೀಲ್ ಆಚಾರ್ಯ ಅವರು ನಿಧನರಾಗಿದ್ದಾರೆ ಎಂದು ನಾನು ನಿಮಗೆ ತಿಳಿಸಲು ಬಹಳ ದುಃಖವಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾಭ್ಯಾಸ ನಡೆಸುತ್ತಿದ್ದ ನೀಲ್ ಆಚಾರ್ಯ ತಾಯಿ ಗೌರಿ ಆಚಾರ್ಯ ಅವರು ಎಕ್ಸ್‍ನಲ್ಲಿ ನಮ್ಮ ಮಗ ಜನವರಿ 28 ರಿಂದ ಕಾಣೆಯಾಗಿದ್ದಾನೆ ಆತ ಯುಎಸ್‍ನ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಅವರು ವಿಶ್ವವಿದ್ಯಾನಿಲಯದಲ್ಲಿ ಅವನನ್ನು ಕಾರಿನಲ್ಲಿ ಡ್ರಾಪ್ ಮಾಡಿದ ಉಬರ್ ಚಾಲಕನು ಕೊನೆಯದಾಗಿ ನೋಡಿದನು. ನಾವು ಅವನ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಲ್ಲ ನಿಮಗೆ ಏನಾದರೂ ತಿಳಿದಿದ್ದರೆ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಪೋಸ್ಟ್ ಮಾಡಿ ವಿನಂತಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ,ಪಡ್ರ್ಯೂ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮತ್ತು ನೀಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಕಾನ್ಸುಲೇಟ್ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ನೀಡುತ್ತದೆ ಎಂದಿದ್ದರು.

15 ರಾಜ್ಯಗಳ 56 ರಾಜ್ಯಸಭಾ ಸದಸ್ಯರ ಸ್ಥಾನಕ್ಕೆ ಚುನಾವಣೆ ಘೋಷಣೆ

ಆದರೆ ಪಡ್ರ್ಯೂ ಕ್ಯಾಂಪಸ್‍ನಲ್ಲಿರುವ ಮೌರಿಸ್ ಜೆ. ಜುಕ್ರೋ ಲ್ಯಾಬೋರೇಟರೀಸ್‍ನ ಹೊರಗೆ ವಿದ್ಯಾರ್ಥಿಯ ಶವ ಕಂಡುಬಂದಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ಬಗ್ಗೆ ತಿಳಿದುನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಸ್ನೇಹಿತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಹಂಗಾಮಿ ಮುಖ್ಯಸ್ಥ ಕ್ರಿಸ್ ಕ್ಲಿಫ್ಟನ್‍ತಿಳಿಸಿದ್ದಾರೆ.

ಇತ್ತೀಚೆಗೆ ಅಮೇರಿಕಾದಲ್ಲಿ ಎಂಬಿಎ ಪದವಿ ಗಳಿಸಿದ್ದ ಮತ್ತು ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿ ಅವರ ಭೀಕರ ಹತ್ಯೆಯ ಸುದ್ದಿಯ ನಂತರ ಈಗ ಆಚಾರ್ಯ ಅವರ ಸಾವು ಆತಂಕ ಮೂಡಿಸಿದೆ. ಪೊಲೀಸರು ವಿವಿಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News