ನವದೆಹಲಿ,ಫೆ.1- ವಿನಾಶಕಾರಿ ನೋಟು ಅಮಾನೀಕರಣದ ವಿಪತ್ತನ್ನು ಖಾಸಗಿ ಬಂಡವಾಳದಾರರು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಮತ್ತು ರಾಹುಲ್‍ಗಾಂಧಿ ಹೇಳಿದ್ದು ನಿಜವಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಪಾದಿಸಿದ್ದಾರೆ.
ಉಳಿಗಮಾನ್ಯ ವ್ಯವಸ್ಥೆ ವಿರುದ್ಧ ಸಮರ ಸಾರುವ ಸಮಯ ಬಂದಿದೆ : ಹೇಮಂತ್ ಸೊರೆನ್
ಪೇಟಿಎಂ ಪೇಮಿಂಟ್ಸ್ ಬ್ಯಾಂಕ್ ಲಿಮಿಟೆಡ್ ವಹಿವಾಟಿನ ಮೇಲೆ ಆರ್‍ಬಿಐ ಫೆ.29 ರವರೆಗೂ ನಿಬಂಧ ಹೇರಿದ ಬೆನ್ನಲ್ಲೇ ಸದರಿ ಆದೇಶವನ್ನು ಟ್ಯಾಗ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲ ಆರ್‍ಬಿಐನ ಆದೇಶದಿಂದ ರಾಹುಲ್‍ಗಾಂಧಿ ಮತ್ತು ಕಾಂಗ್ರೆಸ್‍ನ ಹೇಳಿಕೆಗಳು ನಿಜವಾಗುತ್ತಿವೆ. ನೋಟು ಅಮಾನೀಕರಣ, ವಿನಾಶಕಾರಿ ಆದೇಶವಾಗಿತ್ತು. ಈ ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಪೇಟಿಎಂ ನಂತಹ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಯವರ ಫೋಟೊದೊಂದಿಗೆ ದೇಶದ ಎಲ್ಲಾ ದಿನಪತ್ರಿಕೆಗಳಿಗೆ ನೂರಾರು ಕೋಟಿ ರೂ. ಖರ್ಚು ಮಾಡಿ ಮುಖಪುಟದ ಜಾಹೀರಾತು ನೀಡಿದ್ದರು ಎಂದು ಹೇಳಿದ್ದಾರೆ.
ಆರ್‍ಬಿಐನ ಆದೇಶದ ನಂತರ ಕೋಟ್ಯಂತರ ಷೇರುದಾರರ ಪರಿಸ್ಥಿತಿ ಏನು ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರ ಇದಕ್ಕೆ ಉತ್ತರಿಸಬೇಕು ಮತ್ತು ಉತ್ತರದಾಯಿ ಆಗಬೇಕೆಂದು ಆಗ್ರಹಿಸಿದ್ದಾರೆ.