Homeರಾಷ್ಟ್ರೀಯಮಾಲ್ಡಾ ಮಾವಿನ ಹಣ್ಣಿಗೆ ವಿದೇಶದಲ್ಲಿ ಭಾರಿ ಬೇಡಿಕೆ : ಒಂದೇ ವಾರದಲ್ಲೇ 10 ಟನ್‌ ರಫ್ತು

ಮಾಲ್ಡಾ ಮಾವಿನ ಹಣ್ಣಿಗೆ ವಿದೇಶದಲ್ಲಿ ಭಾರಿ ಬೇಡಿಕೆ : ಒಂದೇ ವಾರದಲ್ಲೇ 10 ಟನ್‌ ರಫ್ತು

Malda mangoes in high demand abroad: 10 tonnes exported

ಕೋಲ್ಕತ್ತಾ, ಜುಲೈ 1-ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪ್ರಸಿದ್ಧ ಮಾವಿನ ಹಣ್ಣುಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಕಳೆದ ಒಂದು ವಾರದಲ್ಲಿ 10 ಟನ್‌‍ ಪ್ರೀಮಿಯಂ ಗುಣಮಟ್ಟದ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದೆ.

ಈ ಋತುವಿನಲ್ಲಿ ಒಟ್ಟು 100 ಟನ್‌ಗಿಂತ ಹೆಚ್ಚು ರಫ್ತು ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಐಸಿಎಆರ್‌ ಕೇಂದ್ರೀಯ ಉಪೋಷ್ಣ ತೋಟಗಾರಿಕಾ ಸಂಶೋಧನಾ
ಸಂಸ್ಥೆ ,ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ದುಶ್ಯಂತ್‌ ರಾಘವ್‌‍ಅವರ ಪ್ರಕಾರ, ಇದುವರೆಗೆ ಸುಮಾರು 7 ಟನ್‌‍ ಮಾವಿನ ಹಣ್ಣುಗಳನ್ನು ಪಶ್ಚಿಮ ಏಷ್ಯಾದ ದೇಶಗಳಿಗೆ ಹಾಗೂ 3 ಟನ್‌‍ ಹಣ್ಣುಗಳನ್ನು ಇಟಲಿಯ ಮಿಲಾನ್‌‍ ನಗರಕ್ಕೆ ರವಾನಿಸಲಾಗಿದೆ.

ಈವರೆಗೆ ಅಮ್ರಪಾಲಿ ತಳಿಯ ಮಾವಿನ ಹಣ್ಣುಗಳನ್ನು ಮಾತ್ರ ರಫ್ತು ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ವೃಂದಾವನಿ, ಫಜ್ಲಿ ಹಾಗೂ ಅಶ್ವಿನಾ ತಳಿಗಳನ್ನು ಒಳಗೊಂಡಂತೆ ಇನ್ನೂ 100 ಟನ್‌ಗಿಂತ ಹೆಚ್ಚು ಹಣ್ಣುಗಳನ್ನು ರಫ್ತು ಮಾಡುವ ನಿರೀಕ್ಷೆಯಿದೆ. ಹಲವು ದೇಶಗಳು ಮಾಲ್ಡಾದ ಪ್ರೀಮಿಯಂ ಮಾವಿನ ಹಣ್ಣುಗಳನ್ನು ಖರೀದಿಸಲು ಆಸಕ್ತಿ ತೋರಿವೆ ಎಂದು ಅವರು ತಿಳಿಸಿದ್ದಾರೆ.

ಉತ್ತಮ ಕೃಷಿ ಪದ್ಧತಿ ಅಡಿಯಲ್ಲಿ ರೂಪಿಸಿರುವ ಮಾಲ್ಡಾ ಮಾವಿನ ಕ್ಲಸ್ಟರ್‌ನಲ್ಲಿ ಸುಮಾರು 200 ರೈತರುಭಾಗಿಯಾಗಿದ್ದು, ಸುಮಾರು 500 ಹೆಕ್ಟೇರ್‌ ಪ್ರದೇಶವನ್ನು ಒಳಗೊಂಡಿದೆ. ಹೂ ಬಿಡುವ ಹಂತದಿಂದ ಹಿಡಿದು ಕೊಯ್ಲು, ಗುಣಮಟ್ಟ ವಿಂಗಡಣೆ ಹಾಗೂ ಅಂತಿಮ ಪ್ಯಾಕಿಂಗ್‌ವರೆಗೆ ಸಿಐಎಸ್‌‍ಎಚ್‌‍ಕೆವಿಕೆ ಮೇಲ್ವಿಚಾರಣೆ ನಡೆಸಿ, ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಾಗುತ್ತಿದೆ ಎಂದು ರಾಘವ್‌ ವಿವರಿಸಿದರು.

ವಿದೇಶಿ ಬೇಡಿಕೆ ಹೆಚ್ಚಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿಯೂ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ ಎಂದು ಅವರು ಹೇಳಿದರು.ಈ ಉಪಕ್ರಮದಿಂದ ಮಾಲ್ಡಾ ಮಾವಿನ ಹಣ್ಣಿನ ರಫ್ತು ಸಾಮರ್ಥ್ಯ ಹೆಚ್ಚಿದ್ದು, ರೈತರಿಗೆ ಹೊಸ ಅಂತರರಾಷ್ಟ್ರೀಯ ಮಾರುಕಟ್ಟೆಗಳು ಲಭ್ಯವಾಗುವುದರ ಜೊತೆಗೆ ಆದಾಯವೂ ಹೆಚ್ಚಲು ನೆರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News