Homeಬೆಂಗಳೂರು3 ದಿನಗಳಲ್ಲಿ ಬೆಂಗಳೂರಿನ 202ಕಿ.ಮೀ ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು

3 ದಿನಗಳಲ್ಲಿ ಬೆಂಗಳೂರಿನ 202ಕಿ.ಮೀ ಉದ್ದದ ಪಾದಚಾರಿ ಮಾರ್ಗ ಒತ್ತುವರಿ ತೆರವು

202 km long footpath encroachment cleared in 3 days in Bengaluru

ಬೆಂಗಳೂರು, ಜು.4- ಕಳೆದ ಮೂರು ದಿನಗಳಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 202 ಕಿ.ಮೀ ಉದ್ದದ ರಸ್ತೆಗಳ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ. ಆರ್ಟಿರಿಯಲ್‌ ಹಾಗೂ ಸಬ್‌‍-ಆರ್ಟಿರಿಯಲ್‌ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ವಿವರ ಈ ರೀತಿ ಇದೆ.

ಜುಲೈ 1ರಂದು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ:
ಪೂರ್ವ ನಗರ ಪಾಲಿಕೆ: 13.25 ಕಿ.ಮೀ
ಕೇಂದ್ರ ನಗರ ಪಾಲಿಕೆ: 16.35 ಕಿ.ಮೀ
ಉತ್ತರ ನಗರ ಪಾಲಿಕೆ: 12.85 ಕಿ.ಮೀ
ದಕ್ಷಿಣ ನಗರ ಪಾಲಿಕೆ: 11.00 ಕಿ.ಮೀ
ಪಶ್ಚಿಮ ನಗರ ಪಾಲಿಕೆ: 23.10 ಕಿ.ಮೀ ಒಟ್ಟು: 76.55 ಕಿ.ಮೀ ಉದ್ದದ ಒತ್ತುವರಿ ತೆರವು ಮಾಡಲಾಗಿದೆ.
ಜುಲೈ 2ರಂದು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿವರ;
ಪೂರ್ವ ನಗರ ಪಾಲಿಕೆ: 8.80 ಕಿ.ಮೀ
ಕೇಂದ್ರ ನಗರ ಪಾಲಿಕೆ: 8.55 ಕಿ.ಮೀ
ಉತ್ತರ ನಗರ ಪಾಲಿಕೆ: 12.70 ಕಿ.ಮೀ
ದಕ್ಷಿಣ ನಗರ ಪಾಲಿಕೆ: 10.40 ಕಿ.ಮೀ
ಪಶ್ಚಿಮ ನಗರ ಪಾಲಿಕೆ: 24.10 ಕಿ.ಮೀ ಸೇರಿದಂತೆ ಒಟ್ಟು: 64.55 ಕಿ.ಮೀ ಉದ್ದದ ಒತ್ತುವರಿ ತೆರವುಗೊಳಿಸಲಾಗಿದೆ.
ಜುಲೈ 3ರಂದು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ:
ಪೂರ್ವ ನಗರ ಪಾಲಿಕೆ: 8.55 ಕಿ.ಮೀ
ಕೇಂದ್ರ ನಗರ ಪಾಲಿಕೆ: 10.95 ಕಿ.ಮೀ
ಉತ್ತರ ನಗರ ಪಾಲಿಕೆ: 14.10 ಕಿ.ಮೀ
ದಕ್ಷಿಣ ನಗರ ಪಾಲಿಕೆ: 11.50 ಕಿ.ಮೀ
ಪಶ್ಚಿಮ ನಗರ ಪಾಲಿಕೆ: 16.50 ಕಿ.ಮೀ ಸೇರಿದಂತೆ ಒಟ್ಟು: 61.60 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ.
ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 202.7 ಕಿ.ಮೀ ಉದ್ದದ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Latest News