ನವದೆಹಲಿ,ಫೆ.5- ಫ್ರಾನ್ಸ್‌ನಲ್ಲಿ ಎನ್‍ಪಿಸಿಐ ಇಂಟರ‍್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್‍ಐಪಿಎಲ್) ಮತ್ತು ಫ್ರೆಂಚ್ ಪಾವತಿ ಭದ್ರತಾ ಕಂಪನಿ ಲೈರಾ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸ್ವೀಕಾರವನ್ನು ಪರಿಚಯಿಸಿದೆ. ಐಫೆಲ್ ಟವರ್ ಈಗ ಭಾರತೀಯ ಪ್ರವಾಸಿಗರಿಗೆ ಯುಪಿಐ ಬಳಸಿ ಆನ್‍ಲೈನ್‍ನಲ್ಲೇ ಟಿಕೆಟ್‍ಗಳನ್ನು ಖರೀದಿಸಲು ಅನುವು ಮಾಡಿಕೊಟ್ಟಿದೆ. ಯುರೋಪಿಯನ್ ದೇಶಗಳಲ್ಲಿ ಫ್ರಾನ್ಸ್ ಈ ಪರಿಣಾಮಕಾರಿ ಪಾವತಿ ಕಾರ್ಯವಿಧಾನವನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ.
ಎನ್‍ಪಿಸಿಐ ಇಂಟರ‍್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್‍ಐಪಿಎಲ್) ಇ-ಕಾಮರ್ಸ್ ಮತ್ತು ಸಾಮೀಪ್ಯ ಪಾವತಿಗಳನ್ನು ಭದ್ರಪಡಿಸುವಲ್ಲಿ ಫ್ರೆಂಚ್ ನಾಯಕ ಲೈರಾ ಸಹಭಾಗಿತ್ವದಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ)ನ್ನು ಫ್ರಾನ್ಸ್‍ನಲ್ಲಿ ಸ್ವೀಕರಿಸುವುದಾಗಿ ಘೋಷಿಸಿದೆ. ಐಫೆಲ್ ಟವರ್ ಪ್ರವಾಸಕ್ಕೆ ಹೋಗೋ ಭಾರತೀಯರು ಈಗ ಯುಪಿಐ ಬಳಸಿ ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸೋ ಸುಲಭ ಅವಕಾಶ ಸಿಕ್ಕಿದೆ. ಈ ಪಾವತಿ ವಿಧಾನದಿಂದ ತ್ವರಿತ, ಸುಲಭ ಮತ್ತು ತೊಂದರೆ ಮುಕ್ತ ಪ್ರವಾಸಕ್ಕೆ ಅನುಕೂಲವಾಗಿದೆ.
ಫ್ರಾನ್ಸ್‍ನ ಪ್ಯಾರೀಸ್‍ನಲ್ಲಿರೋ ಭಾರತೀಯ ರಾಯಭಾರ ಕಚೇರಿಯಲ್ಲಿ ಆಯೋಜಿಸಿದ್ದ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಮಾಡಲಾಗಿದೆ. ಈ ವೇಳೆ ಫ್ರಾನ್ಸ್ ಮತ್ತು ಮೊನಾಕೊದಲ್ಲಿನ ಭಾರತದ ರಾಯಭಾರಿ ಗೌರವಾನ್ವಿತ ಎಂ.ಜಾವೇದ್ ಅಶ್ರಫ್, ಪ್ರಧಾನ ಮಂತ್ರಿಗಳ ಮಂತ್ರಿ ಪ್ರತಿನಿಧಿ ಮತ್ತು ಫ್ರಾನ್ಸ್ ಸರ್ಕಾರದ ವಕ್ತಾರ ಪ್ರಿಸ್ಕಾ ಥೆವೆನೊಟ್, ಲೈರಾ ಗ್ರೂಪ್ ಅಧ್ಯಕ್ಷ ಅಲೈನ್ ಲಾಕೂರ್, ಲೈರಾ ಫ್ರಾನ್ಸ್ ನ ವಾಣಿಜ್ಯ ನಿರ್ದೇಶಕ ಕ್ರಿಸ್ಟೋಫ್ ಮಾರಿಯೆಟ್ ಮತ್ತು ಸೊಸಿಯೆಟೆ ಡಿ ಎಕ್ಸ್ ಪಿಎಲ್ ನ ಸಿಇಒ ಪ್ಯಾಟ್ರಿಕ್ ಬ್ರಾಂಕೊ ರುಯಿವೊ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.
ದ್ವೇಷ ಭಾಷಣ ಮಾಡಿದ್ದ ಮುಫ್ತಿ ಸಲ್ಮಾನ್ ಅರೆಸ್ಟ್, ಬೆಂಬಲಿಗರ ಹೈಡ್ರಾಮಾ
ಐಫೆಲ್ ಟವರ್ ಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯ ಪ್ರವಾಸಿಗರು ಎರಡನೇ ಅತಿದೊಡ್ಡ ಗುಂಪಾಗಿರುವುದನ್ನು ಪರಿಗಣಿಸಿಲಾಗಿದ್ದು, ಈ ಮಹತ್ವದ ಘೋಷಣೆ ಮಾಡಲಾಗಿದೆ. ಇದರಿಂದ ಶೀಘ್ರದಲ್ಲೇ ಪ್ರವಾಸೋದ್ಯಮ, ವ್ಯಾಪಾರಿಗಳ ಪ್ರಗತಿ ಸಾಧ್ಯವಾಗುತ್ತದೆ ಎಂದು ಫ್ರಾನ್ಸ್ ದೇಶ ಅಭಿವೃದ್ದಿ ಬಗ್ಗೆ ವ್ಯಕ್ತಪಡಿಸಿದೆ. ಈ ಪಾವತಿ ಕ್ರಮದಿಂದ ಭಾರತೀಯ ಪ್ರವಾಸಿಗರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಪಾವತಿಯನ್ನು ಪ್ರಾರಂಭಿಸಲು ತಮ್ಮ ಯುಪಿಐ ಚಾಲಿತ ಅಪ್ಲಿಕೇಶನ್‍ಗಳನ್ನು ಬಳಸುವ ಮೂಲಕ ಸುರಕ್ಷಿತ ಆನ್‍ಲೈನ್ ವಹಿವಾಟುಗಳನ್ನು ನಡೆಸಬಹುದಾಗಿದೆ.
ಫ್ರಾನ್ಸ್ ದೇಶ ಭಾರತೀಯ ಪ್ರವಾಸಿಗರಿಗೆ ತಡೆರಹಿತ ಪಾವತಿ ಆಯ್ಕೆಯನ್ನು ಒದಗಿಸುವುದಲ್ಲದೆ, ಪ್ರವಾಸೋದ್ಯಮ ಹಾಗೂ ವ್ಯಾಪಾರಸ್ಥರಿಗೆ ಸಹಾಯವಾಗುವಂತ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಮಾಡುತ್ತಿದೆ. ಪ್ರವಾಸಿಗರಿಗೆ ಮೊದಲೇ ತಾವು ಪ್ರವಾಸದಲ್ಲಿ ಅನುಕೂಲಕರವಾದ ಹೋಟೆಲ್ ವ್ಯವಸ್ಥೆ, ವಸ್ತುಸಂಗ್ರಹಾಲಯಗಳು, ನೋಡಬೇಕಾದ ಸ್ಥಳಗಳ ಭೇಟಿ ಬಗ್ಗೆ ಮೊದಲೇ ಟಿಕೆಟ್ ಕಾಯ್ದಿರಿಸುವಂತ ಸುಲಭ ವಿಧಾನ ತರಲಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ : ದಿಯಾಕುಮಾರಿ
380 ದಶಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ, ಪಾವತಿ ವಿಧಾನವಾಗಿ ಯುಪಿಐ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಮನಾರ್ಹವಾಗಿ ಗುರುತಿಸಿಕೊಂಡಿದೆ. ಜನವರಿ 2024ರಲ್ಲಿ, ಯುಪಿಐ 12.2 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ. ಈ ಸಾಧನೆಯಿಂದ ವಿಶ್ವದ ಅತ್ಯಂತ ಪರಿಣಾಮಕಾರಿ, ತ್ವರಿತ ಪಾವತಿ ವ್ಯವಸ್ಥೆಯಾಗಿ ಗುರುತಿಸಿಕೊಳ್ಳುತ್ತಿದೆ.