ವಿಶಾಖಪಟ್ಟಣಂ, ಫೆ.5- ಬಲ ತೋರು ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಯಂಗ್ ಪ್ಲೇಯರ್ ಶುಭಮನ್ ಗಿಲ್ ಅವರು ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ನಡುವಿನ 4ನೇ ದಿನದಾಟದಿಂದ ವಿಶ್ರಾಂತಿ ಪಡೆದಿದ್ದಾರೆ. ಎಸಿಸಿ- ವಿಡಿಸಿಎ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶತಕ (104 ರನ್) ಸಿಡಿಸಿ ತಂಡಕ್ಕೆ ಒಟ್ಟಾರೆ 399 ರನ್ ಮುನ್ನಡೆಗೆ ಗಿಲ್ ಪ್ರಮುಖ ಪಾತ್ರ ವಹಿಸಿದ್ದರು.
ಪಂದ್ಯದ ಎರಡನೇ ದಿನದ ಕ್ಷೇತ್ರ ರಕ್ಷಣೆಯ ಸಮಯದಲ್ಲೇ ಗಿಲ್ ಬಲತೋರಿನ ಬೆರಳಿಗೆ ಗಾಯ ಮಾಡಿಕೊಂಡಿದ್ದರೂ ಆ ನೋವಿನಲ್ಲೇ ಮೂರನೇ ಕ್ರಮಾಂಕದಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಟೀಕಾಕಾರರ ಟೀಕೆಗೆ ತಕ್ಕ ಉತ್ತರ ನೀಡಿದ್ದರು.
ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ : ವಿಜಯೇಂದ್ರ ಸ್ಪಷ್ಟನೆ
ಶುಭಮನ್ ಗಿಲ್ ಅವರು ಎರಡನೇ ದಿನದಾಟದ ವೇಳೆ ಬಲತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ಅವರು ಇಂದು ಕ್ಷೇತ್ರರಕ್ಷಣೆ ಮಾಡದೆ ವಿಶ್ರಾಂತಿ ಪಡೆದಿದ್ದಾರೆ ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ.
ಉತ್ತಮ ಫೀಲ್ಡರ್ ಆಗಿರುವ ಶುಭಮನ್ ಗಿಲ್ ಅವರು ದ್ವಿತೀಯ ಟೆಸ್ಟ್‍ನ ಇಂಗ್ಲೆಂಡ್‍ನ ಮೊದಲ ಇನಿಂಗ್ಸ್‍ನಲ್ಲಿ 4 ಕ್ಯಾಚ್‍ಗಳನ್ನು ಪಡೆದು ಆಂಗ್ಲರ ರನ್ ದಾಹಕ್ಕೆ ಬ್ರೇಕ್ ಹಾಕಿದ್ದರು. ಶುಭಮನ್ ಗಿಲ್ ಅವರು ವಿಶ್ರಾಂತಿ ಪಡೆದಿದ್ದರಿಂದ ಅವರ ಜಾಗದಲ್ಲಿ ಮುಂಬೈನ ಯುವ ಆಟಗಾರ ಶರ್ಫಾರಾಝ್‍ಖಾನ್ ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾರೆ.