Tuesday, August 19, 2025
Homeಬೆಂಗಳೂರುರಸ್ತೆ ಹಂಪ್ ಬಳಿ ಉರುಳಿದ ಸ್ಕೂಟರ್ : ಸವಾರ ದುರ್ಮರಣ

ರಸ್ತೆ ಹಂಪ್ ಬಳಿ ಉರುಳಿದ ಸ್ಕೂಟರ್ : ಸವಾರ ದುರ್ಮರಣ

ಬೆಂಗಳೂರು, ಫೆ.5- ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಯುವಕ ರಸ್ತೆಯ ಹಂಪ್ಸ್ ದಾಟಿಸುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೊಲ್ಲಹಳ್ಳಿ ಗ್ರಾಮದ ಹನುಮಾರೆಡ್ಡಿ ಕಾಲೋನಿ ನಿವಾಸಿ ಅರುಣಕುಮಾರ(26) ಮೃತಪಟ್ಟ ಯುವಕ.

ಅರುಣಕುಮಾರ ಅವರು ನಿನ್ನೆ ಸಂಜೆ 6.50ರ ಸುಮಾರಿನಲ್ಲಿ ತಮ್ಮ ಹೋಂಡಾ ಸ್ಕೂಟರ್‍ನಲ್ಲಿ ದೊಡ್ಡ ನಾಗಮಂಗಲ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಎಲೆಕ್ಟ್ರಾನಿಕ್ ಸಿಟಿ ಫೇಸ್-2 ನಲ್ಲಿನ ಟೆಕ್ ಮಹೀಂದ್ರ ಕಂಪೆನಿ ಮುಂಭಾಗ ರಸ್ತೆಯಲ್ಲಿದ್ದ ಹಂಪ್ಸ್ ದಾಟಿಸುತ್ತಿದ್ದಾಗ ವೇಗವಾಗಿದ್ದ ಸ್ಕೂಟರ್‍ನ್ನು ನಿಯಂತ್ರಿಸಲು ಸಾಧ್ಯವಾಗದೆ ಉರುಳಿ ಬಿದ್ದಿದ್ದಾನೆ.

ಶತಕ ಸಿಡಿಸಿದ ಬೆನ್ನಲ್ಲೇ ತಂಡದಿಂದ ಹೊರಬಿದ್ದ ಶುಭಮನ್ ಗಿಲ್

ಅರುಣಕುಮಾರ್ ತಲೆ ಹಾಗೂ ಇತರೆ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೋರಮಂಗಲದ ಸೇಂಟ್‍ಜಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಸುದ್ದಿ ತಿಳಿದು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದು ಮೃತರ ಸಹೋದರ ಅನಿಲ್‍ಕುಮಾರ್ ನೀಡಿದ ದೂರಿನನ್ವಯ ಸ್ವಯಂ ರಸ್ತೆ ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News