Friday, April 11, 2025
Homeರಾಜ್ಯಹಾಸನ-ಮೈಸೂರು ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ 'ಹುಚ್ಚಾಟ'

ಹಾಸನ-ಮೈಸೂರು ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ‘ಹುಚ್ಚಾಟ’

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರ ಹುಚ್ಚಾಟ ಹೆಚ್ಚಾಗಿದ್ದು, ನಡುರಸ್ತೆಯಲ್ಲಿ ವೀಲ಼ಿಂಗ್ ಮಾಡಿ ವಾಹನ ಸವಾರರಿಗೆ ಕಾಟ ಕೊಟ್ಟಿರುವ ಘಟನೆ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ನಡೆದಿದೆ. ತ್ರಿಬಲ್ ರೈಡಿಂಗ್ ಮಾಡುತ್ತಾ ಇಡಿ ರಸ್ತೆ ಆವರಿಸಿಕೊಂಡ ಯುವಕರು ಮೂರ್ನಾಲ್ಕು ಬೈಕ್‌ನಲ್ಲಿ ಒಟ್ಟೊಟ್ಟಿಗೆ ರಸ್ತೆಯಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾರೆ.

ಮಹಿಳೆಯನ್ನು ಕೊಂದು, ಶವದ ಜೊತೆ ಸಂಭೋಗ ಮಾಡಿದ್ದ ವಿಕೃತ ಕಾಮಿಗಳ ಬಂಧನ

ಯುವಕರ ಹುಚ್ಚಾಟದ ವೀಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಸ್ವಲ್ಪ‌ ಯಡವಟ್ಟಾದರೂ ಪ್ರಾಣಕ್ಕೆ ಅಪಾಯವಾಗುತ್ತದೆ ಎಂದು ತಿಳಿದಿದ್ದರು, ಬೈಕ್‌ನಲ್ಲಿ ಮನಬಂದಂತೆ ಓಡಾಡುತ್ತಾ ರಸ್ತೆಯಲ್ಲಿ ಬರುವ ಇತರೆ ವಾಹನಗಳಿಗೆ ಸೈಡ್ ಕೂಡದೆ ಪುಂಡಾಟವಾಡುತ್ತಿದ್ದು, ವ್ಹೀಲಿಂಗ್ ಪುಂಡರಿಗೆ ಬ್ರೇಕ್ ಹಾಕುವಂತೆ ಪೋಲಿಸರಿಗೆ ಸ್ಥಳೀಯರ ಆಗ್ರಹಿಸಿದ್ದಾರೆ.

ಕಿಲೋಮೀಟರ್‌ಗಟ್ಟಲೆ ವ್ಹೀಲಿಂಗ್ ಮಾಡುತ್ತಾ ಜನರಿಗೆ ತೊಂದರೆ ಕೊಡ್ತಿರುವ ಪುಂಡರಿಗೆ ಖಾಕಿ ಬಿಸಿ ಮುಟ್ಟಿಸುವಂತೆ ಒತ್ತಾಯಿಸಿದ್ದಾರೆ

RELATED ARTICLES

Latest News