Thursday, December 12, 2024
Homeರಾಷ್ಟ್ರೀಯ | Nationalಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್

ಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್

ನವದೆಹಲಿ,ಫೆ.6- ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಡಿ ಅಧಿಕಾರಿಗಳು ಪ್ರಸ್ತುತ ದೆಹಲಿ, ಚಂಡೀಗಢ ಮತ್ತು ವಾರಣಾಸಿಯಾದ್ಯಂತ 12 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಹಾಗೂ ರಾಜ್ಯಸಭಾ ಸಂಸದ ಎನ್‍ಡಿ ಗುಪ್ತಾ, ದೆಹಲಿ ಜಲ ಮಂಡಳಿಯ ಮಾಜಿ ಸದಸ್ಯ ಶಲಭ್ ಕುಮಾರ್ ಸೇರಿದಂತೆ ಹಲವರು ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಇಡಿ ದಾಳಿಗೆ ನಾವು ಹೆದರುವುದಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲ (ಯಾವುದೇ ಅಕ್ರಮದ) ಇಡಿ ಆರೋಪಿಗಳನ್ನು ಸರ್ಕಾರಿ ಸಾಕ್ಷಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಚಿವ ಅತಿಶಿ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಹಿಳೆಯನ್ನು ಕೊಂದು, ಶವದ ಜೊತೆ ಸಂಭೋಗ ಮಾಡಿದ್ದ ವಿಕೃತ ಕಾಮಿಗಳ ಬಂಧನ

ಜಲ್ ಬೋರ್ಡ್‍ನಲ್ಲಿ ನಡೆದ ಆರೋಪದ ಹಗರಣಕ್ಕೆ ಸಂಬಂಸಿದಂತೆ ನಡೆದ ದಾಳಿಗಳು – ಎಎಪಿ ಪತ್ರಿಕಾಗೋಷ್ಠಿಗೆ ಗಂಟೆಗಳ ಮೊದಲು ಬಂದಿದೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಎರಡು ಆರ್ಥಿಕ ಅವ್ಯವಹಾರಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಜಲ ಮಂಡಳಿಯ ಇಬ್ಬರು ಮಾಜಿ ಮುಖ್ಯ ಎಂಜಿನಿಯರ್‍ಗಳನ್ನು ಬಂಧಿಸಲಾಗಿತ್ತು.

RELATED ARTICLES

Latest News