Home ಇದೀಗ ಬಂದ ಸುದ್ದಿ ಹನುಮ ಧ್ವಜ ಕಿಚ್ಚು : ಇಂದು ಮಂಡ್ಯ- ಕೆರೆಗೋಡು ಬಂದ್

ಹನುಮ ಧ್ವಜ ಕಿಚ್ಚು : ಇಂದು ಮಂಡ್ಯ- ಕೆರೆಗೋಡು ಬಂದ್

0
ಹನುಮ ಧ್ವಜ ಕಿಚ್ಚು : ಇಂದು ಮಂಡ್ಯ- ಕೆರೆಗೋಡು ಬಂದ್

ಮಂಡ್ಯ,ಫೆ.9- ಹನುಮ ಧ್ವಜ ಕಿಚ್ಚು ಹೆಚ್ಚಿದ್ದು ಇಂದು ಮಂಡ್ಯ ನಗರ ಹಾಗೂ ಕೆರೆಗೋಡು ಗ್ರಾಮ ಬಂದ್ ಯಶಸ್ವಿಯಾಗಿದೆ. ಹಿಂದೂಪರ ಸಂಘಟನೆಗಳು ಹಾಗೂ ಕೆಲವು ಸಂಘಸಂಸ್ಥೆಗಳು ಬಂದ್‍ಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಕೆರೆಗೋಡು ಗ್ರಾಮ ಸಂಪೂರ್ಣ ಸ್ತಬ್ಧಗೊಂಡಿದ್ದರೆ, ಮಂಡ್ಯ ನಗರದ ಕೆಲವೆಡೆ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಿದ್ದಾರೆ.

ಕೆರೆಗೋಡಿನ ಹನುಮ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿರುವ ಸಂಘಟನೆಗಳ ಮುಖಂಡರು ಸರ್ಕಾರ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಶಿವಸೇನೆ ಮುಖಂಡನನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ಸಾಮಾಜಿಕ ಕಾರ್ಯಕರ್ತ

ಇಡೀ ಮಂಡ್ಯ ನಗರದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದ್ದು, ಕೆರೆಗೋಡು ಗ್ರಾಮದ ಹೊರಭಾಗದ ನಾಖಾಬಂಧಿ ಮಾಡಿ ಒಬ್ಬೊಬ್ಬರನ್ನೇ ಪರಿಶೀಲಿಸಿ ಮಂಡ್ಯ ನಗರದ ಕಡೆ ಬಿಡುತ್ತಿದ್ದುದು ಕಂಡುಬಂದಿತು. ಯಾವುದೇ ಕಾರಣಕ್ಕೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಸ್ಥಳೀಯ ಶಾಸಕರು ಹಾಗೂ ಕೆಲವರು ಬೇಕೆಂತಲೇ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಂದೂ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಬಂದ್‍ಗೆ ಬೆಂಬಲ ಇಲ್ಲ ಎಂದು ಹೇಳಿದ್ದರೂ ಸಹ ಮುಖಂಡರು, ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಶಾಸಕರ ಮನೆಗಳಿಗೂ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.