Thursday, May 2, 2024
Homeರಾಷ್ಟ್ರೀಯBREAKING : ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಸ್ವಾಮಿನಾಥನ್...

BREAKING : ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ನವದೆಹಲಿ,ಫೆ.9- ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್.ಸ್ವಾಮಿನಾಥನ್, ಮಾಜಿ ಪ್ರಧಾನಿಗಳಾದ ಚೌಧರಿ ಚರಣಸಿಂಗ್ ಮತ್ತು ಪಿ.ವಿ.ನರಸಿಂಹರಾವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಣೆ ಮಾಡಲಾಗಿದೆ.
1990ರ ದಶಕದಲ್ಲಿ ಆರ್ಥಿಕ ಉದಾರೀಕರಣಕ್ಕೆ ಮುನ್ನುಡಿ ಬರೆದಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್, ರೈತ ನಾಯಕ ಚೌಧರಿ ಚರಣ್ ಸಿಂಗ್ ಹಾಗೂ ಹಸಿರುಕ್ರಾಂತಿಯ ಹರಿಕಾರನೆಂದೇ ಖ್ಯಾತಿಯಾಗಿದ್ದ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಅದ್ವೀತಿಯ ಸಾಧನೆಗಾಗಿ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿಯನ್ನು ಪ್ರಕಟಿಸಿದೆ.

ಇತ್ತೀಚೆಗಷ್ಟೇ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಹಾಗು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಈ ಮೂವರು ಸಾಧಕರಿಗೂ ಪ್ರಶಸ್ತಿ ಲಭಿಸಿದೆ.ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ ಐದು ಭಾರತ ರತ್ನಗಳನ್ನು ಘೋಷಣೆ ಮಾಡಿದಂತಾಗಿದೆ.

ಪ್ರಧಾನಿ ನರೇಂದ್ರಮೋದಿ ಅವರು ತಮ್ಮ ಅಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದು, ಈ ಮೂವರು ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಮರಣೋತ್ತರವಾಗಿ ನೀಡುತ್ತಿರುವುದು ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.

ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ಆಂಧ್ರಪ್ರದೇಶದ ಹೆಮ್ಮೆಯ ಪುತ್ರ ಪಿ.ವಿ.ನರಸಿಂಹ ರಾವ್, ರೈತರಿಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದ ಉತ್ತರಪ್ರದೇಶದ ಹೆಮ್ಮೆಯ ಚೌಧರಿಯ ಚರಣ್ ಸಿಂಗ್ ಮತ್ತು ಭಾರತದ ಕೃಷಿ ಅಭಿವೃದ್ಧಿಗೆ ಅಭೂತಪೂರ್ವ ಕೊಡುಗೆ ನೀಡಿದ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಚೌಧರಿ ಚರಣ್ ಸಿಂಗ್:
ದೇಶದ 5ನೇ ಪ್ರಧಾನಿಯಾಗಿ 1979, ಜುಲೈ 28ರಂದು ಅಧಿಕಾರ ಸ್ವೀಕರಿಸಿದ್ದ ಚೌಧರಿ ಚರಣ್ ಸಿಂಗ್ ಅವರು, 1980 ಜನವರಿ 14ರವರೆಗೆ ಆಡಳಿತ ನಡೆಸಿದ್ದರು. ಉತ್ತರಪ್ರದೇಶದ ಮೀರತ್‍ನಲ್ಲಿ 1902ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಅವರು ರೈತ ನಾಯಕನೆಂದೇ ಖ್ಯಾತಿಯಾದವರು.

ಚರಣ್ ಸಿಂಗ್ ಅವರು ತಮ್ಮ ಕಾಲದಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದರು. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಹೀಗಾಗಿ ಅವರ ಜನ್ಮದಿನವಾದ 23ರಂದು ರೈತ ದಿನವನ್ನಾಗಿ ಆಚರಿಸಲಾಗುತ್ತದೆ. ಹಲವಾರು ಕೃಷಿ ಸ್ನೇಹಿ ನೀತಿಗಳನ್ನು ರೂಪಿಸಿದ ಸಿಂಗ್ ಅವರು 1987ರಲ್ಲಿ ನಿಧನರಾದರು.

ಪಿ.ವಿ.ನರಸಿಂಹರಾವ್:
1921ರ ಜೂನ್ 28ರಂದು ಈಗಿನ ತೆಲಂಗಾಣದ ಕರೀಂನಗರ ಜಿಲ್ಲೆಯ ವಂಗಾರಾ ಗ್ರಾಮದಲ್ಲಿ ಜನಿಸಿದರು. ಅವರ ತವರೂರು ಉತ್ತರ ಮತ್ತು ದಕ್ಷಿಣದ ಸೇತುವಿವಂತಿತ್ತು. ಗ್ರಾಮಸ್ಥರು ತೆಲುಗು, ಹಿಂದಿ, ಮರಾಠಿ, ಕನ್ನಡ, ಒರಿಯಾ ಭಾಷೆಗಳನ್ನು ಅರಿತಿದ್ದರು. ನಿಜಾಮರ ನಾಡಾಗಿದ್ದರಿಂದ ಉರ್ದುವಿನ ಪ್ರಭಾವ ಇತ್ತು. ನರಸಿಂಹರಾಯರು 15 ಭಾಷೆಗಳನ್ನು ಬಲ್ಲವರಾಗಿದ್ದರು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಸರಕಾರ, ಯಾವುದೇ ವಿಳಂಬಕ್ಕೆ ಕಾರಣವಿಲ್ಲದಂತೆ ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಸ್ಮಾರಕವನ್ನು ದಿಲ್ಲಿಯಲ್ಲಿ ನಿರ್ಮಿಸಿತು. ಆಗ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯನಾಯ್ಡು ಖುದ್ದಾಗಿ ಸ್ಮಾರಕ ನಿರ್ಮಾಣದ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಪ್ರಧಾನಿಯಾಗಿ ಪಿ.ವಿ.ನರಸಿಂಹ ರಾವ್ ಅವರು ಅಧಿಕಾರ ಸ್ವೀಕರಿಸಿದಾಗ ದೇಶ ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿತ್ತು. ಸರಕಾರಕ್ಕೆ ಬಹುಮತ ಇರಲಿಲ್ಲ. ಪಕ್ಷದ ಒಳಗಿನಲ್ಲೂ ಅವರಿಗೆ ವಿರೋಗಳಿದ್ದರು. ದಶದಿಕ್ಕುಗಳಿಂದ ಪ್ರತಿಕೂಲತೆಗಳನ್ನು ಎದುರಿಸಿಯೂ, ದೇಶವನ್ನು ದಿವಾಳಿತನದ ಗಂಡಾಂತರಗಳಿಂದ ಯಶಸ್ವಿಯಾಗಿ ಪಾರು ಮಾಡಿದರು. ಆರ್ಥಿಕ ಉದಾರೀಕರಣದ ಬಾಗಿಲನ್ನು ತೆರೆದು ನವ ಭಾರತದ ಅಭ್ಯುದಯಕ್ಕೆ, ಜಿಡಿಪಿ ಬೆಳವಣಿಗೆಗೆ ಬುನಾದಿ ನಿರ್ಮಿಸಿದರು. ತೆಲಂಗಾಣದ ಗ್ರಾಮವೊಂದರಲ್ಲಿ ಜನಿಸಿ, ಕಡು ಕಷ್ಟದ ಬಾಲ್ಯವನ್ನುಂಡರೂ, ಮೇಧಾವಿಯಾಗಿ, ಬಹುಭಾಷಾ ಪಂಡಿತರಾಗಿ, ಮುತ್ಸದ್ಧಿಯಾಗಿ ಬೆಳೆದ ಅತ್ಯಪರೂಪದ ರಾಜಕಾರಣಿ.

ಹನುಮ ಧ್ವಜ ಕಿಚ್ಚು : ಇಂದು ಮಂಡ್ಯ- ಕೆರೆಗೋಡು ಬಂದ್

RELATED ARTICLES

Latest News