ನಿತ್ಯ ನೀತಿ : ಸಂಸ್ಕøತಿಯು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿವೆಯೇ ಹೊರತು ನಮ್ಮನ್ನು ಅನ್ಯೋನ್ಯ ದೂರ ಮಾಡುವುದಕ್ಕಲ್ಲ. ಅದು ಸೋದರ ಭಾವನೆ ಬೆಳೆಸಿ ಸಂಘಟಿಸುವುದಕ್ಕಾಗಿಯೇ ಹೊರತು ಉಚ್ಚ-ನೀಚ ಭಾವನೆ ಬಿತ್ತಿ ಜನತಯೆನ್ನು ವಿಂಗಡಿಸುವುದಕ್ಕಲ್ಲ.
ಪಂಚಾಂಗ ಶನಿವಾರ 10-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಧನಿಷ್ಠಾ / ಯೋಗ: ವರಿಯಾ / ಕರಣ: ಕಿಂಸ್ತುಘ್ನ
ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.24
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ :6.00-7.30
ರಾಶಿ ಭವಿಷ್ಯ
ಮೇಷ: ಹಿರಿಯ ಸಹೋದ್ಯೋಗಿಗಳ ಕಿರುಕುಳದಿಂದ ಕೆಲಸ ಬದಲಾವಣೆ ಮಾಡುವಿರಿ.
ವೃಷಭ: ಆತ್ಮೀಯರೊಬ್ಬರ ದಿಢೀರ್ ಅಗಲುವಿಕೆಯಿಂದ ಮಾನಸಿಕ ಆಘಾತವಾಗಲಿದೆ.
ಮಿಥುನ: ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭ ದೊರೆಯಲಿದೆ. ಮಕ್ಕಳಿಂದ ಸಂತೋಷ ಸಿಗಲಿದೆ.
ಕಟಕ: ಮಾನಸಿಕ ಕಿರಿಕಿರಿ ಹೆಚ್ಚುವುದರೊಂದಿಗೆ ಉದ್ಯೋಗದಲ್ಲಿ ಒತ್ತಡ ಅನುಭವಿಸುವಿರಿ.
ಸಿಂಹ: ಸೌಜನ್ಯತೆಯಿಂದ ನಡೆದುಕೊಳ್ಳುವುದ ರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
ಕನ್ಯಾ: ನಿಮ್ಮವರೇ ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗಲಿದ್ದಾರೆ.
ತುಲಾ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ.
ವೃಶ್ಚಿಕ: ಹಿರಿಯರನ್ನು ಭೇಟಿ ಯಾಗುವ ಅಪೂರ್ವ ಅವಕಾಶ ಒದಗಿ ಬರಲಿದೆ.
ಧನುಸ್ಸು: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಗಳು ದೂರವಾಗಿ ಉತ್ತಮ ಬದಲಾವಣೆಗಳಾಗಲಿವೆ.
ಮಕರ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.
ಕುಂಭ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲವನ್ನು ಸಹ ತೀರಿಸುವಿರಿ.
ಮೀನ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.