Friday, May 3, 2024
Homeಮನರಂಜನೆಪ್ರಯೋಗಾತ್ಮಕ ಸ್ಕ್ರೀನ್ ಪ್ಲೇ ಜೂನಿ

ಪ್ರಯೋಗಾತ್ಮಕ ಸ್ಕ್ರೀನ್ ಪ್ಲೇ ಜೂನಿ

ಸ್ಪ್ಲಿಟ್ ಪರ್ಸನಾಲಿಟಿ ಕುರಿತು ಈ ಹಿಂದೆ ಅನೇಕ ಚಿತ್ರಗಳು ಬಂದಿವೆ. ಆದರೆ ಇಂದು ತೆರೆಕಂಡು ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೂನಿ ಚಿತ್ರದಲ್ಲಿ ವಸ್ತು ಇದೇಯಾದರೂ ಬೇರೊಂದು ಆಯಾಮಗಳಲ್ಲಿ ಸಾಗುತ್ತಾ ಪ್ರೇಕ್ಷಕರಿಗೆ ಹೊಸ ಅನುಭೂತಿಯನ್ನು ಮೂಡಿಸುತ್ತದೆ. ನಾಯಕ ಪೃಥ್ವಿ ಅಂಬಾರ್ ಕೆಫೆ ನಡೆಸುವ ಮಾಲೀಕ. ವಿಶೇಷವೆಂದರೆ ಮಾಲೀಕನೇ ಹೆಡ್ ಕುಕ್. ಪ್ರತಿದಿನ ಹೊಸದೊಂದು ತಿಂಡಿಯನ್ನು ಪ್ರಯೋಗಿಸಿ, ಹೊಸ ಹೊಸ ರುಚಿಗಳನ್ನು ಕೊಟ್ಟು ಗ್ರಾಹಕರನ್ನ ಸೆಳೆಯುವುದು ಅವನ ಆದ್ಯ ಕರ್ತವ್ಯ. ಈ ವೃತ್ತಿಯನ್ನೇ ನಾಯಕ ಏಕೆ ಮಾಡಿಕೊಂಡ ಅನ್ನುವುದಕ್ಕೆ ಸೂಕ್ಷ್ಮವಾಗಿ ಒಂದಿಷ್ಟು ದೃಶ್ಯಗಳ ಮೂಲಕ ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಸುಂದರ ಕೆಫೆ. ಪ್ರತಿದಿನ ಹೊಸ ಹೊಸ ಗ್ರಾಹಕರ ಆಗಮನ. ಅ ಗ್ರಹಕರಲ್ಲಿ ಒಂದು ಸುಂದರ ಹುಡುಗಿ, ಕಥೆ ರೋಮಾಂಚನಕಾರಿಯಾಗಿ ಶುರುವಾಗಲು ಕಾರಣವಾಗುತ್ತಾಳೆ. ಕೆಫೆಯಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಕೆಲ ದಿನಗಳು ನಾಪತ್ತಿಯಾಗಿದ್ದ ಪ್ರೇಯಸಿನಯನ್ನ ಹುಡುಕಿಕೊಂಡು ಮನೆ ಬಳಿ ಹೋದಾಗ ಯಾರು ನೀನು ನನಗೆ ಗೊತ್ತಿಲ್ಲವಲ್ಲ ಎಂಬ ಮಾತುಗಳು ಅವಳಿಂದ ಎದರಾಗುತ್ತವೆ. ನೀನು ಪ್ರೀತಿಸುತ್ತಿರುವ ಹುಡುಗಿ ಜೂನಿ, ನಾನು ಮಾನ್ಸಿ ಅಂತಾಳೆ .ಹಾಗಾದ್ರೆ ನೀವು ಟ್ವಿನ್ಸ್ ಎಂಬ ಪ್ರಶ್ನೆ ನಾಯಕನಿಂದ ಬರುತ್ತದೆ.

ಅದಕ್ಕೆ ನಾಯಕಿ ಇಲ್ಲ ಅಂತಾಳೆ. ಹೀಗೆ ಇಬ್ಬರ ನಡುವೆ ತರ್ಕ ತಾರಕಕ್ಕೇರುತ್ತದೆ. ಆಗ ಹೇಳುತ್ತಾಳೆ ನಾನೇ ಜೂನಿ, ನಾನೇ ಮಾನ್ಸಿ ಎಂದು. ಇದು ಹೇಗೆ ಸಾಧ್ಯ ಎಂದಾಗ ನನ್ನಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಇದೆ ಇದೊಂದು ಮಾನಸಿಕ ಕಾಯಿಲೆ, ಬೇರೆ ಬೇರೆ ಸಮಯಗಳಲ್ಲಿ ಜೂನಿ, ಮಾನಸಿಯಾಗಿ ಬದಲಾಗುತ್ತೇನೆ ಎಂದು ಹೇಳುತ್ತಾಳೆ. ಇದನ್ನು ತಿಳಿದ ನಾಯಕ ಪ್ರೀತಿಸುವುದನ್ನು ಮಾತ್ರ ಬಿಡುವುದಿಲ್ಲ. ಆಕೆಯನ್ನು ಖುಷಿಪಡಿಸಲು ತನ್ನ ಎತ್ತರದ ಮನೆಯ ಮೇಲೆ ಸೂರ್ಯಾಸ್ತವನ್ನು ತೋರಿಸಲು ಕರೆದೊಯ್ದು ಖುಷಿ ಪಡಿಸುತ್ತಾನೆ.

ಆ ಸಂದರ್ಭದಲ್ಲಿ ನಾಯಕಿ ಬೇರೊಂದು ರೂಪ ತಾಳುತ್ತಾಳೆ. ಅದು ಮಾನಸಿಯಾಗಿಯಲ್ಲ ಮಗದೊಂದು ಪರ್ಸನಾಲಿಟಿ ಜಾಕಿ, ಅದು ಹುಡುಗ. ನಾಯಕಿಯಲ್ಲಿರುವುದು ಇಬ್ಬರಲ್ಲ ಮೂರು ಜನ ಎಂದು ನಾಯಕ ತಿಳಿದುಕೊಳ್ಳುತ್ತಾನೆ. ನಾಯಕಿ ಈ ವಿಚಿತ್ರ ಕಾಯಿಲೆಯಿಂದ ಗಟಿಸುವ ಘಟನೆಗಳು ಜೂನಿ ಚಿತ್ರದ ಹೈಲೈಟ್ಸ್ . ಅದರಿಂದ ಆಕೆ ಹೊರಬರುತ್ತಾಳ ? ಇದು ಸಸ್ಪೆನ್ಸ್

ಮುಂಚೆ ಹೇಳಿದಾಗೆ ಇದೊಂದು ಪಕ್ಕ ಪ್ರಯೋಗಾತ್ಮಕ ಚಿತ್ರವಾಗಿದ್ದು. ಬಾಲ್ಯದಲ್ಲಿ ನಡೆಯುವ ಆಘಾತಗಳಿಗೆ ನಮ್ಮ ಮಾನಸಿಕ ಸ್ಥಿತಿ ಬದಲಾಗಿ ಆ ಘಟನೆಗಳು ಶಾಶ್ವತವಾಗಿ ಹೇಗೆ ಕಾಡುತ್ತವೆ ಎಂಬೆಲ್ಲ ವಿಚಾರಗಳನ್ನು ನಿರ್ದೇಶಕ ವೈಭವ್ ಮಹಾದೇವ್ ತುಂಬಾ ನಾಜೂಕಾಗಿ ಸ್ಕ್ರೀನ್ ಪ್ಲೇ ಮೂಲಕ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಎಲ್ಲಿಯೂ ಗೋಜಲಿಲ್ಲದೇ ಹೇಳುವ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ.ಜೂನಿ, ಮಾನ್ಸಿ, ಜಾಕಿ ಈ ಮೂರು ಪಾತ್ರಗಳನ್ನು ಆವಾಭಾವ ಬದಲಾಯಿಸಿ ತುಂಬಾ ಮೆಚುರಿಟಿಯಿಂದ ಅಭಿನಯಿಸಿರುವ ರಿಷಿಕಾ ನಾಯಕ್ ಅಭಿನಯಕ್ಕೆ ಒಂದು ಮೆಚ್ಚುಗೆ ಇರಲೇಬೇಕು. ಈಗಾಗಲೇ ನಟನೆಯಲ್ಲಿ ತನ್ನನ್ನು ನಿರೂಪಿಸಿಕೊಂಡಿರುವ ನಟ ಪೃಥ್ವಿ ಅಂಬಾರ್ ಜೂನಿ ಚಿತ್ರದ ಕಥೆಯನ್ನು ಹೊತ್ತು ಮೆರೆದಿದ್ದಾರೆ.

ಅಲ್ಲಲ್ಲಿ ಈ ರೀತಿಯ ಪ್ರಯೋಗಾತ್ಮಕ ಚಿತ್ರಗಳು ಬಂದಾಗ, ಅವುಗಳಿಗೆ ಸರಿಯಾದ ಪ್ರೋತ್ಸಾಹ ಮನ್ನಣೆ ಸಿಕ್ಕರೆ, ಮತ್ತಷ್ಟು ಈ ರೀತಿಯ ಕಥೆಗಳನ್ನು ನೋಡುವ ಭಾಗ್ಯ ಪ್ರೇಕ್ಷಕರದ್ದಾಗುತ್ತದೆ.

RELATED ARTICLES

Latest News