Thursday, February 22, 2024
Homeಬೆಂಗಳೂರುತೆರಿಗೆ ಪಾವತಿಸುವಂತೆ ಮೆಟ್ರೋಗೆ ನೋಟಿಸ್

ತೆರಿಗೆ ಪಾವತಿಸುವಂತೆ ಮೆಟ್ರೋಗೆ ನೋಟಿಸ್

ಬೆಂಗಳೂರು,ಫೆ.9- ನಮ್ಮ ಮೆಟ್ರೊ ಸಂಸ್ಥೆಯಿಂದ ಬರಬೇಕಿರುವ 64 ಕೋಟಿ ರೂ. ಗಳಿಗೂ ಹೆಚ್ಚು ಆಸ್ತಿ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಆಸ್ತಿ ತೆರಿಗೆ ವಸೂಲಿಗೆ ಪಾಲಿಕೆ ನಮ್ಮ ಮೆಟ್ರೋ ಗೆ ಬಿಸಿ ಮುಟ್ಟಿಸಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳಿಗೆ ನೋಟೀಸ್ ನೀಡಲಾಗಿದೆ.

ಇದುವರೆಗೂ ತೆಪ್ಪಗಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ನಿದ್ರೆಯಿಂದ ಎದ್ದವರಂತೆ ದಿಢೀರ್ ನೋಟಿಸ್ ಜಾರಿ ಕೂಡಲೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ತೆರಿಗೆ ವಸೂಲಿಗೆ ಬರೋಬ್ಬರಿ 30 ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿಗೆ ನೋಟಿಸ್ ಜಾರಿ ಮಾಡಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 4,500 ಕೋಟಿ ತೆರಿಗೆ ವಸೂಲಿಗೆ ಸರ್ಕಾರ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿ ಈ ವರ್ಷಾಂತ್ಯದೊಳಗೆ ಟಾರ್ಗೆಟ್ ರೀಚ್ ಮಾಡುವಂತೆ ತಾಕೀತು ಮಾಡಿತ್ತು. ಹೀಗಾಗಿ ಮಾರ್ಚ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಾರ್ಗೆಟ್ ರೀಚ್ ಮಾಡುವ ಉದ್ದೇಶದಿಂದ ಆಸ್ತಿ ತೆರಿಗೆ ವಸೂಲಿಗೆ ವೇಗ ನೀಡಿರುವ ಪಾಲಿಕೆ ಅಕಾರಿಗಳು ಮೆಟ್ರೋಗೆ ನೋಟೀಸ್ ಜಾರಿ ಮಾಡಿದ್ದಾರೆ.

ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದವರ ಆಸ್ತಿ ಮುಟ್ಟುಗೋಲು : ಪರಮೇಶ್ವರ್

ಕೇಂದ್ರದ ತೆರಿಗೆ ಬಿಟ್ಟು ರಾಜ್ಯದ ಪಾಲು ಕೇಳಲು ಮುಂದಾಗಿರುವ ಸರ್ಕಾರ ಬಿಬಿಎಂಪಿಯ ಮೂಲಕ ತೆರಿಗೆ ವಸೂಲಿಗೆ ಸಜ್ಜಾಗಿದೆ. ಬಿಟ್ಟಿ ಭಾಗ್ಯಗಳಿಂದ ಸರ್ಕಾರದ ಖಜಾನೆ ಬರಿದಾಗಿರುವುದು ತೆರಿಗೆ ವಸೂಲಿಗೆ ಪ್ರಮುಖ ಕಾರಣ ಎನ್ನಲಾಗಿದೆ.

RELATED ARTICLES

Latest News