Friday, November 22, 2024
Homeಮನರಂಜನೆಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಟಿ ಕಂಗನಾ ರಣಾವತ್ ಸ್ಪರ್ಧೆ..?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಟಿ ಕಂಗನಾ ರಣಾವತ್ ಸ್ಪರ್ಧೆ..?

ನವದೆಹಲಿ,ಫೆ.9-ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಎಂಬ ಮಾತು ಹರಿದಾಡುತ್ತಿದೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 150 ಲೋಕಸಭಾ ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದ್ದು, ವಿಶೇಷವಾಗಿ ಅವುಗಳಲ್ಲಿ ಅತೀ ಹೆಚ್ಚು ಬಿಜೆಪಿ ಸೋತಿರುವ ಕ್ಷೇತ್ರಗಳೇ ಆಗಿರುತ್ತದೆ ಎಂದು ತಿಳಿದು ಬಂದಿದೆ.

ಆ ಪೈಕಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರವೂ ಸೇರಿದ್ದು, ಚುನಾವಣಾ ಘೋಷಣೆಗೂ ಮೊದಲೇ ಬಿಜೆಪಿ ಇಲ್ಲಿ ತನ್ನ ಭದ್ರಕೋಟೆಯನ್ನು ಬಲಿಷ್ಠಪಡಿಸಲು ನಿರ್ಧರಿಸಿದೆ. ಹಿಮಾಚಲ ಪ್ರದೇಶದ ಏಕೈಕ ಲೋಕಸಭಾ ಕ್ಷೇತ್ರವಾಗಿದ್ದು, ಇಲ್ಲಿ ಸದ್ಯ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದೆ. ಇದಕ್ಕೂ ಮೊದಲ ಈ ಕ್ಷೇತ್ರ ಬಿಜೆಪಿಯದ್ದಾಗಿತ್ತು. ಆದರೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಸದ್ಯ ಚುನಾವಣೆ ಘೋಷಣೆಗೂ ಮುನ್ನವೇ ದೆಹಲಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಂಡಿ ಲೋಕಸಭಾ ಕ್ಷೇತ್ರವೂ ಇದರಲ್ಲಿ ಸೇರಿದೆ. ಇಲ್ಲಿಯೂ ನಿಗದಿತ ಸಮಯಕ್ಕಿಂತ ಮೊದಲು ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆ ಇದ್ದು, ಕಳೆದುಹೋದ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಸಮಯಕ್ಕಿಂತ ಮುಂಚಿತವಾಗಿ ಪ್ರಚಾರವನ್ನು ಪ್ರಾರಂಭಿಸುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ.

BREAKING : ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಹೊರಬೀಳುತ್ತಿದ್ದು, ಇದರಲ್ಲಿ ವಿಶೇಷವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಕಳೆದ ಕೆಲವು ಸಮಯದಿಂದ ಕಂಗನಾ ರಣಾವತ್ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ರ್ಪಸಲಿದ್ದಾರೆ ಎಂಬ ಮಾತುಗಳು ಸಿಕ್ಕಾಪಟ್ಟೆ ಹರಿದಾಡಿತ್ತು. ಕಂಗನಾ ರಣಾವತ್ ಕೂಡ ಇದನ್ನು ಅಲ್ಲಗಳೆಯದೆ ಚುನಾವಣೆಗೆ ಸ್ರ್ಪಧಿಸುವ ಬಗ್ಗೆ ಪರೋಕ್ಷವಾಗಿ ಉತ್ಸುಕತೆ ತೋರಿದ್ದರು. ಹೀಗಾಗಿ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಇನ್ನುಳಿದಂತೆ ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಅವರ ಹೆಸರು ಕೂಡ ಮಂಡಿ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಸಾಲಿನಲ್ಲಿ ಪ್ರಬಲವಾಗಿ ಕೇಳಿಬಂದಿದ್ದು, ಆದರೆ ಜೈರಾಮ್ ಠಾಕೂರ್ ಅವರು ಚುನಾವಣೆಗೆ ಸ್ರ್ಪಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಲಾಲೂ ಪತ್ನಿ, ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು

ಇದಲ್ಲದೆ, ಬಿಜೆಪಿಯ ಮಾಜಿ ಅಭ್ಯರ್ಥಿ ಬ್ರಿಗೇಡಿಯರ್ ಖುಶಾಲ್ ಠಾಕೂರ್, ಮನಾಲಿ ಪುರಸಭೆಯ ಅಧ್ಯಕ್ಷ ಮತ್ತು ಎಚ್‍ಪಿ ಮುನ್ಸಿಪಲ್ ಕಾಪೆರ್ರೇಷನ್/ಉಪಾಧ್ಯಕ್ಷ ಫೆಡರೇಶನ್ ಅಧ್ಯಕ್ಷ ಚಮನ್ ಕಪೂರ್, ಬಿಜೆಪಿ ನಾಯಕ ಅಜಯ್ ರಾಣಾ ಮತ್ತು ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ಆಶ್ರಯ ಶರ್ಮಾ ಅವರ ಪ್ರಮುಖ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.

ಇನ್ನು ಕಂಗನಾ ಕೂಡ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದು, ಇದರೊಂದಿಗೆ ಮಾಜಿ ಸಂಸದ ಮಹೇಶ್ವರ್ ಸಿಂಗ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರ ವಯಸ್ಸನ್ನು ಪರಿಗಣಿಸಿ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

RELATED ARTICLES

Latest News