Friday, November 22, 2024
Homeರಾಷ್ಟ್ರೀಯ | Nationalದೆಹಲಿಯಲ್ಲಿ ಮೊಳಗಿದ ರೈತ ಕಹಳೆ : ಅಶ್ರುವಾಯು ಪ್ರಯೋಗ, ಹಲವರ ಬಂಧನ

ದೆಹಲಿಯಲ್ಲಿ ಮೊಳಗಿದ ರೈತ ಕಹಳೆ : ಅಶ್ರುವಾಯು ಪ್ರಯೋಗ, ಹಲವರ ಬಂಧನ

ನವದೆಹಲಿ, ಫೆ.13-ರಾಷ್ಟ್ರ ರಾಜಧಾನಿಗೆ ಆಗಮಿಸುವ ರೈತರ ದೆಹಲಿ ಚಲೋ ಮೆರವಣಿಗೆ ಹಿಂಸಾರೂಪ ಪಡೆದಿದ್ದು ಪೊಲೀಸರು ಜಲಪಿರಂಗಿ ಪ್ರಯೋಗಿಸಿ ಅಶ್ರುವಾಯು ಸಿಡಿಸಿದ್ದಾರೆ. ದೆಹಲಿ ಪ್ರವೇಶವನ್ನು ತಡೆಯಲು ಗಡಿಭಾಗಗಳಲ್ಲಿ ಬಹು ಪದರದ ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳ ಗೋಡೆಗಳನ್ನು ನಿರ್ಮಿಸಿದರೂ ಅದನ್ನು ನುಗ್ಗಲು ಪ್ರಯತ್ನಿಸಿದ್ದಾಗ ಪೊಲೀಸರು ಬಲ ಪ್ರಯೋಗ ನಡೆಸಿದ್ದಾರೆ.

ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿ ಸಮೀಪ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‍ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಇಂದು ದೆಹಲಿಗೆ ತೆರಳಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿವೆ.

ಬಹುತೇಕ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಫಿಕ್ಸ್..?

ರೈತರು ಇಂದು ಮುಂಜಾನೆ ತಮ್ಮ ಮೆರವಣಿಗೆಯನ್ನು ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಇಬ್ಬರು ಕೇಂದ್ರ ಸಚಿವರೊಂದಿಗೆ ಚಂಡೀಗಢದಲ್ಲಿ ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಕೃಷಿ ನಾಯಕರೊಬ್ಬರು ಪ್ರತಿಭಟನೆ ಅನಿವಾರ್ಯ ಎಂದಿದ್ದಾರೆ. ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ ಎಂದು ನಾವು ಭಾವಿಸುವುದಿಲ್ಲ. ಅವರು ಇಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಬಯಸುವುದಿಲ್ಲ ಎಂದು ನಾವು ಭಾವಿಸುತ್ತೇವೆ, ನಾವು ದೆಹಲಿಯತ್ತ ಮೆರವಣಿಗೆ ಮಾಡುತ್ತೇವೆ ಎಂದು ಸಭೆಯ ನಂತರ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣದಿಂದಲೇ ಹೆಚ್ಚು ರೈತರು ಇಲ್ಲಿ ಭಾಗಿಯಾಗಿದ್ದು, ಉತ್ತರ ಪ್ರದೇಶ ಸೇರಿದಂತೆ ದೆಹಲಿ ಸಂಪರ್ಕ ಇರುವ ರಸ್ತೆಗಳಲ್ಲಿ ಈಗ ರೈತರ ಪ್ರತಿಭಟನೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಪೊಲೀಸರ ಜೊತೆ ಮಾತಿನ ಚಕಾಮಕಿ ನಡೆದಿದ್ದು, ರೈತರನ್ನು ಸಮಾಧಾನ ಪಡಿಸಲು ಸಾಕಷ್ಟು
ಹರಸಾಹಸ ಮಾಡಲಾಗುತ್ತಿದೆ. ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ಪರಿಸ್ಥಿತಿ ಈಗ ಉದ್ವಿಗ್ನವಾಗಿದೆ.
ಕೇಂದ್ರ ಸಚಿವರು ಹಾಗೂ ರೈತರ ನಿಯೋಗದೊಂದಿಗೆ ಸಭೆಯೂ ಕೂಡ ನಡೆಯುತ್ತಿದ್ದು, ಪ್ರಸ್ತುತ ಇದು ಯಾವ ನಿಲುವು ತಳೆಯುತ್ತದೆ ಎಂದು ತೀವ್ರ ಕೂತುಹಲ ಕೆರಳಿಸಿದೆ. ಯಾವುದೇ ಕಾರಣಕ್ಕೂ ರೈತರು ದೆಹಲಿ ತಲುಪದಂತೆ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಇದೆಂದೂ ಕಾಣದಂತಹ ತಡೆಗೋಡೆಯನ್ನು ನಿರ್ಮಿಸಿದೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಧಾನಸಭೆಯಲ್ಲಿ ಕೋಲಾಹ

ಉದ್ದೇಶಿತ ವ್ಯಾಪಕ ಉದ್ವಿಗ್ನತೆ ಮತ್ತು ಸಾಮಾಜಿಕ ಅಶಾಂತಿ ಯ ದೃಷ್ಟಿಯಿಂದ ನಗರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ, ಮೆರವಣಿಗೆಗಳು ಅಥವಾ ರ್ಯಾಲಿಗಳು ಮತ್ತು ಜನರನ್ನು ಸಾಗಿಸುವ ಟ್ರ್ಯಾಕ್ಟರ್ ಟ್ರಾಲಿಗಳ ಪ್ರವೇಶವನ್ನು ನಿಷೇಸುವ ಸೆಕ್ಷನ್ 144 ಅನ್ನು ದೆಹಲಿ ಪೊಲೀಸರು ಒಂದು ತಿಂಗಳ ಕಾಲ ವಿಧಿಸಿದ್ದಾರೆ.

ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಹೊರಡಿಸಿದ ಆದೇಶಗಳ ಪ್ರಕಾರ, ಮದುವೆಗಳು, ಅಂತ್ಯಕ್ರಿಯೆಗಳು ಮತ್ತು ಇತರ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ಸಭೆಗಳು ಮತ್ತು ಮೆರವಣಿಗೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪೂರ್ವಾನುಮತಿ ಅಗತ್ಯವಿದೆ.

RELATED ARTICLES

Latest News