Saturday, May 11, 2024
Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2024)

ನಿತ್ಯ ನೀತಿ : ಗಿಡದಲ್ಲಿ ಎಷ್ಟೇ ಮುಳ್ಳುಗಳಿದ್ದರೂ ಅದರಲ್ಲಿ ಹೂವು ಅರಳಬೇಕು. ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವುಗಳು ತುಂಬಿದ್ದರೂ ಮುಖದಲ್ಲಿ ನಗು ತುಂಬಿರಬೇಕು.

ಪಂಚಾಂಗ ಬುಧವಾರ 14-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ರೇವತಿ / ಯೋಗ: ಶುಭ / ಕರಣ: ಕೌಲವ

ಸೂರ್ಯೋದಯ : ಬೆ.06.43
ಸೂರ್ಯಾಸ್ತ : 06.25
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಯಂತ್ರೋಪಕರಣಗಳಿಂದ ತೊಂದರೆ ಯಾಗಬಹುದು. ಹುಷಾರಾಗಿರಿ.
ವೃಷಭ: ದಾಂಪತ್ಯದಲ್ಲಿ ಸಮಸ್ಯೆಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.
ಮಿಥುನ: ದಾಯಾದಿ ಕಲಹವಾಗಬಹುದು. ಪ್ರಯಾಣ ಮಾಡದಿರುವುದು ಒಳ್ಳೆಯದು.

ಕಟಕ: ಆಹಾರದಲ್ಲಾಗುವ ವ್ಯತ್ಯಾಸದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಸಿಂಹ: ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆ ಗಮನ ಹರಿಸುವರು. ಶಾಂತಿ, ಸಮಾಧಾನ ಅಗತ್ಯ.
ಕನ್ಯಾ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಆದಾಯ ಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಲಾಭ.

ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೃಶ್ಚಿಕ: ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಸಾಲದ ಬಗ್ಗೆ ಎಚ್ಚರವಿರಲಿ.
ಧನುಸ್ಸು: ಸರ್ಕಾರಿ ನೌಕರರಿಗೆ ಉತ್ತಮ ದಿನ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗೆ ಗಮನ ಹರಿಸಿ.

ಮಕರ: ಮಕ್ಕಳಿಂದ ನೋವುಂಟಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.
ಕುಂಭ: ಅನಾರೋಗ್ಯದಿಂದ ಬಳಲುತ್ತಿದ್ದ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಮೀನ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ಸಂತಸವಾಗಲಿದೆ.

RELATED ARTICLES

Latest News