Saturday, May 11, 2024
Homeರಾಜಕೀಯಇಂದು ಕಾಂಗ್ರೆಸ್ ಶಾಸಕಾಂಗ ಸಭೆ

ಇಂದು ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು,ಫೆ.14- ವಿಧಾನಮಂಡಲದಲ್ಲಿ ಜೆಡಿಎಸ್-ಬಿಜೆಪಿಯ ಒಗ್ಗಟ್ಟಿನ ಹೋರಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಶಾಸಕರನ್ನು ಸಜ್ಜುಗೊಳಿಸುವ ಸಲುವಾಗಿ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ನಿಗಮಮಂಡಳಿ ನೇಮಕಾತಿಯ ಬಳಿಕ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಹಿರಿಯ ಶಾಸಕರು ಸಮಾಧಾನಗೊಂಡಂತಾಗಿದ್ದಾರೆ. ಹೀಗಾಗಿ ಹಿಂದಿನ ಶಾಸಕಾಂಗ ಸಭೆಗಳಲ್ಲಾದಂತೆ ಅಪಸ್ವರಗಳು, ಗೊಂದಲಗಳ ಪ್ರಮಾಣ ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ.

ಭೋಜನಕೂಟದೊಂದಿಗೆ ನಡೆಯುತ್ತಿರುವ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಸಚಿವರು, ಶಾಸಕರಿಗೆ ಕಲಾಪದಲ್ಲಿ ನಡೆಸಬೇಕಾದ ರಣತಂತ್ರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿರುವ ಭಾಷಣದ ಮೇಲಿನ ವಂದನಾ ನಿರ್ಣಯ ನಿನ್ನೆಯಿಂದಲೂ ಚಾಲ್ತಿಯಲ್ಲಿದೆ. ಆಡಳಿತ ಪಕ್ಷದ ಪರವಾಗಿ ಮಾತನಾಡಿರುವ ಶಾಸಕರ ಪೈಕಿ ಬಹಳಷ್ಟು ಮಂದಿ ಸಮರ್ಥ ವಾದವನ್ನು ಮಂಡಿಸಿದ್ದಾರೆ.

16 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಅನಂತರ ವಿಧಾನಮಂಡಲ ಮತ್ತಷ್ಟು ರಂಗೇರುವ ಸಾಧ್ಯತೆಯಿರುವುದರಿಂದಾಗಿ ಶಾಸಕರು ಪೂರ್ವ ತಯಾರಿಯಾಗಿರಬೇಕು. ವಿಪಕ್ಷಗಳ ಆರೋಪ, ಪ್ರತ್ಯಾರೋಪಗಳಿಗೆ ತಕ್ಕ ತಿರುಗೇಟು ನೀಡಬೇಕು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2024)

ಈ ಬಾರಿ ಜೆಡಿಎಸ್‍ನ ಕುಮಾರಸ್ವಾಮಿಯವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ರಣಕಹಳೆ ಮೊಳಗಿಸುವ ಸಾಧ್ಯತೆಯಿದ್ದು, ಅದಕ್ಕೆ ಬಿಜೆಪಿ ಕೂಡ ಧ್ವನಿಗೂಡಿಸುವ ನಿರೀಕ್ಷೆಯಿದೆ. ಅಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‍ನಲ್ಲಿ ಉತ್ಸಾಹಿ ಶಾಸಕರನ್ನು ತಯಾರುಗೊಳಿಸಲಾಗಿದೆ. ಬಿಜೆಪಿಯವರ ಕೋಮು ಪ್ರೇರಿತ ಪ್ರಸ್ತಾಪಗಳಿಗೆ ಕಾಂಗ್ರೆಸ್ ಸೈದ್ಧಾಂತಿಕ ನೆಲೆಗಟ್ಟಿನಲ್ಲೇ ತಿರುಗೇಟು ನೀಡಲು ಮುಂದಾಗಿದೆ.

RELATED ARTICLES

Latest News