Homeಬೆಂಗಳೂರುಬೆಂಗಳೂರು : ಲಿಫ್ಟ್ ದುರಂತ, ಪದವೀಧರ ಸಾವು

ಬೆಂಗಳೂರು : ಲಿಫ್ಟ್ ದುರಂತ, ಪದವೀಧರ ಸಾವು

Bengaluru : Lift accident, graduate's death

ಬೆಂಗಳೂರು,ಜು.16- ಹೋಟೆಲ್‌ ಲಿಫ್ಟ್ ನ ಸಜ್ಜಾ ತಲೆಗೆ ಬಡಿದು ಧಾರವಾಡದ ಯುವಕ ಮೃತಪಟ್ಟಿರುವ ಘಟನೆ ಜಯನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಧಾರವಾಡ ಮೂಲದ ರಾಜೇಶ್‌(22) ಮೃತಪಟ್ಟವರು. ಇವರು ಪದವಿ ವ್ಯಾಸಂಗ ಮಾಡಿದ್ದಾರೆ.

ಈತ ಹೋಟೆಲ್‌ ಬ್ಯುಸಿನೆಸ್‌‍ ಮಾಡುವ ಅಭಿಲಾಷೆ ಹೊಂದಿದ್ದರಿಂದ ಜಯನಗರ 4ನೇ ಟಿ ಬ್ಲಾಕ್‌, 27ನೇ ಕ್ರಾಸ್‌‍, 11ನೇ ಮುಖ್ಯರಸ್ತೆಯಲ್ಲಿರುವ ತನ್ನ ಸ್ನೇಹಿತನ ದಕ್ಷಿಣ ಉಪಹಾರ್‌ ಹೋಟೆಲ್‌ಗೆ ಬಂದು ಅಲ್ಲಿನ ವ್ಯವಸ್ಥೆಗಳನ್ನು ಗಮನಿಸುತ್ತಿದ್ದನು.

ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಹೋಟೆಲ್‌ನ ಸರ್ವೀಸ್‌‍ ಲಿಫ್‌್ಟನಲ್ಲಿ ಪದಾರ್ಥಗಳನ್ನು ಸಾಗಿಸುತ್ತಿದ್ದರು. ಆ ವೇಳೆ ಲಿಫ್ಟ್ ನ ಡೋರ್‌ ತಕ್ಷಣ ಓಪನ್‌ ಆಗಿದೆ. ರಾಜೇಶ್‌ ಹೊರಗೆ ಬರಲು ಮುಂದಾಗುತ್ತಿದ್ದಂತೆ ಏಕಾಏಕಿ ಲಿಫ್ಟ್ ಆಪರೇಟ್‌ ಆಗಿದ್ದರಿಂದ ತಲೆ ಸಿಕ್ಕಿಕೊಂಡು ಸಜ್ಜಾಗೆ ಬಡಿದಿದ್ದರಿಂದ ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News