Homeಬೆಂಗಳೂರುಬೆಂಗಳೂರಿನಲ್ಲಿ ಚುರುಕು ಪಡೆದ ಎಸ್‌‍ಐಆರ್‌ ಪ್ರಕ್ರಿಯೆ

ಬೆಂಗಳೂರಿನಲ್ಲಿ ಚುರುಕು ಪಡೆದ ಎಸ್‌‍ಐಆರ್‌ ಪ್ರಕ್ರಿಯೆ

SIR process accelerated in Bengaluru

ಬೆಂಗಳೂರು, ಜು.17- ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (ಎಸ್‌‍ಐಆರ್‌) ಪ್ರಕ್ರಿಯೆ ಬೆಂಗಳೂರು ನಗರ ಜಿಲ್ಲೆಯಲ್ಲಿ ವೇಗವಾಗಿ ಸಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 40,21,039 ಮತದಾರರ ಪೈಕಿ 31,59,024 ಎನ್ಯೂಮರೇಷನ್‌ ಫಾರ್ಮ್‌ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್‌‍. ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಪ್ರಕಟಣೆ ಪ್ರಕಾರ, ವಿತರಿಸಲಾದ ಫಾರ್ಮ್‌ಗಳಲ್ಲಿ 5,28,156 ಎನ್ಯೂಮರೇಷನ್‌ ಫಾರ್ಮ್‌ಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಮನೆ ಮನೆಗೆ ಭೇಟಿ ನೀಡಿ ನಡೆಯುತ್ತಿರುವ ವಿಶೇಷ ಅಭಿಯಾನದ ವೇಳೆ ಮತದಾರರು ಸ್ವಯಂ ಆನ್‌ಲೈನ್‌‍ ಮೂಲಕ 42,052 ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಇದೇ ವೇಳೆ, ಪರಿಶೀಲನಾ ಕಾರ್ಯಾಚರಣೆಯಲ್ಲಿ 46,563 ಮತದಾರರು ಮನೆಗಳಲ್ಲಿ ಗೈರುಹಾಜರಾಗಿರುವುದು, 1,93,336 ಮಂದಿ ಶಾಶ್ವತವಾಗಿ ವಲಸೆ ಹೋಗಿರುವುದು ಹಾಗೂ 45,669 ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಬೂತ್‌ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಜಿಲ್ಲಾಡಳಿತವು ಮತದಾರರು ಅಗತ್ಯ ದಾಖಲೆಗಳೊಂದಿಗೆ ಸಹಕರಿಸಿ ಪರಿಷ್ಕರಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಕೊಂಡಿದ್ದಾರೆ.

RELATED ARTICLES

Latest News