ಬೆಂಗಳೂರು,ಜು.17- ಉತ್ತರ ವಿಭಾಗದ 13 ಠಾಣೆಗಳ ಪೊಲೀಸರು ಇತ್ತೀಚೆಗೆ ಕಾರ್ಯಾಚರಣೆ ಕೈಗೊಂಡು 94 ಪ್ರಕರಣಗಳಲ್ಲಿ 70 ಮಂದಿ ಆರೋಪಿಗಳನ್ನು ಬಂಧಿಸಿ ನಗದು ಸೇರಿದಂತೆ 4.91 ಕೋಟಿ ರೂ.ಮೌಲ್ಯದ ಚಿನ್ನಾಭರಣ, ವಾಹನಗಳು, ಮೊಬೈಲ್‌ಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲೇಶ್ವರಂ :
14 ವಿವಿಧ ಪ್ರಕರಣಗಳಲ್ಲಿ 12 ಮಂದಿ ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ 1.13 ಲಕ್ಷ ನಗದು ಸೇರಿದಂತೆ 1,84,14,997 ರೂ ಮೌಲ್ಯದ 1103.94 ಗ್ರಾಂ ಚಿನ್ನಾಭರಣ, 6 ದ್ವಿಚಕ್ರ ವಾಹನಗಳು, 3 ಸಿಲಿಂಡರ್, 17 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಾಂಪುರ:
ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಬಂಧಿಸಿ 2 ಪ್ರಕರಣಗಳನ್ನು ಶ್ರೀರಾಂಪುರ ಠಾಣೆ ಪೊಲೀಸರು ಪತ್ತೆ ಹಚ್ಚಿ 2.90 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ರಾಜಾಜಿನಗರ:
ಎಂಟು ಮಂದಿ ಆರೋಪಿಗಳನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿ 17.23 ಲಕ್ಷ ಮೌಲ್ಯದ 105 ಗ್ರಾಂ ಚಿನ್ನಾಭರಣ, 409 ಗ್ರಾಂ ಬೆಳ್ಳಿ ವಸ್ತುಗಳು, 2 ದ್ವಿಚಕ್ರವಾಹನ, 10 ಮೊಬೈಲ್‌ಗಳು ಹಾಗೂ 2.99 ಲಕ್ಷ ನಗದು, ಲ್ಯಾಪ್‌ಟಾಪ್, ಟಿವಿಯನ್ನು ವಶಕ್ಕೆ ಪಡೆದಿದ್ದಾರೆ.
ಸುಬ್ರಮಣ್ಯನಗರ:
ಆರೋಪಿಯೊಬ್ಬನನ್ನು ಬಂಧಿಸಿರುವ ಸುಬ್ರಮಣ್ಯನಗರ ಠಾಣೆ ಪೊಲೀಸರು ಮೂರು ಪ್ರಕರಣಗಳಲ್ಲಿ 4.12 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಮಹಾಲಕ್ಷ್ಮೀಲೇಔಟ್:
ಎರಡು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು 52 ಸಾವಿರ ನಗದು ಸೇರಿ 2.20 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಂದಿನಿ ಲೇಔಟ್:
ಮೂವರು ಆರೋಪಿಗಳನ್ನು ಬಂಧಿಸಿ ಏಳು ಪ್ರಕರಣಗಳಲ್ಲಿ ನಂದಿನಿ ಲೇಔಟ್ ಠಾಣೆ ಪೊಲೀಸರು 48.50 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ, 480 ಗ್ರಾಂ ಬೆಳ್ಳಿ ವಸ್ತುಗಳು, 9 ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ 44.780 ಕೆಜಿ ಶ್ರೀಗಂಧದ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯಶವಂತಪುರ:
9 ಪ್ರಕರಣಗಳಲ್ಲಿ 36.37 ಲಕ್ಷ ರೂ. ಮೌಲ್ಯದ 161.5 ಗ್ರಾಂ ಚಿನ್ನಾಭರಣ, 17 ಮೊಬೈಲ್‌ಗಳು ಹಾಗೂ ಎಲೆಕ್ಟ್ರಿಕ್ ವೈರ್‌ಗಳನ್ನು ಯಶವಂತಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ಆರು ಮಂದಿಯನ್ನು ಬಂಧಿಸಿದ್ದಾರೆ.
ಆರ್‌ಎಂಸಿ ಯಾರ್ಡ್:
ಆರೋಪಿಯೊಬ್ಬನನ್ನು ಬಂಧಿಸಿ 23 ಲಕ್ಷ ಮೌಲ್ಯದ 11 ಗ್ರಾಂ ವಜ್ರದ ಆಭರಣ ವಶಪಡಿಸಿಕೊಂಡರೇ, ಜಾಲಹಳ್ಳಿ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 3.78 ಲಕ್ಷ ರೂ. ಮೌಲ್ಯದ 27.6 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಜೆಸಿನಗರ:
ವಿವಿಧ 13 ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಜೆಸಿನಗರ ಠಾಣೆ ಪೊಲೀಸರು 30.10 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನಾಭರಣ ,8 ದ್ವಿಚಕ್ರ ವಾಹನಗಳು, 2 ಮೊಬೈಲ್‌ಗಳು, 2 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಆರ್‌ಟಿನಗರ:
14 ಮಂದಿ ಆರೋಪಿಗಳನ್ನು ಬಂಧಿಸಿ 9 ಪ್ರಕರಣಗಳಲ್ಲಿ 30.18 ಲಕ್ಷ ರೂ. ಮೌಲ್ಯದ 171.39 ಗ್ರಾಂ ಚಿನ್ನಾಭರಣ,350 ಗ್ರಾಂ ಬೆಳ್ಳಿ ವಸ್ತುಗಳು, 8 ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, 15 ಮೊಬೈಲ್‌ಗಳು ಹಾಗೂ 8 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಸಂಜಯನಗರ:
ವಿವಿಧ 19 ಪ್ರಕರಣಗಳಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿ 27.44 ಲಕ್ಷ ಮೌಲ್ಯದ 53.42 ಗ್ರಾಂ ಚಿನ್ನಾಭರಣ, 930.25 ಗ್ರಾಂ ಬೆಳ್ಳಿ ವಸ್ತುಗಳು, 4 ದ್ವಿಚಕ್ರ ವಾಹನ. 2 ತ್ರಿಚಕ್ರ ವಾಹನ, 10 ಮೊಬೈಲ್‌ಗಳು ಹಾಗೂ 13.9 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.
ಹೆಬ್ಬಾಳ:
ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಠಾಣೆ ಪೊಲೀಸರು ಆರು ಪ್ರಕರಣಗಳನ್ನು ಭೇದಿಸಿ 82 ಲಕ್ಷ ರೂ. ಮೌಲ್ಯದ 507 ಗ್ರಾಂ ಚಿನ್ನಾಭರಣ, 212 ಗ್ರಾಂ ಬೆಳ್ಳಿ ವಸ್ತುಗಳು, 5 ದ್ವಿಚಕ್ರ ವಾಹನಗಳು ಹಾಗೂ 80 ಸಾವಿರ ಹಣ ಜಪ್ತಿ ಮಾಡಿದ್ದಾರೆ.
