ಬೆಂಗಳೂರು,ಜು.17- ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಈ ಬಗ್ಗೆ ಬಾಣಸವಾಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಬಾಣಸವಾಡಿಯ ಆರ್ಎಸ್ಪಾಳ್ಯ ಇಂದಿರಾ ಸ್ಟ್ರೀಟ್ನ ಮನೆಯೊಂದರಲ್ಲಿ ಜೇಸನ್ ಅಂಥೋಣಿ ಮತ್ತು ರೋಸಿನ್ ಲಿವಿಂಗ್-ಟು-ಗೆದರ್ನಲ್ಲಿದ್ದು, ಇವರಿಗೆ ಎರಡು ವರ್ಷದ ಹೆಣ್ಣು ಮಗುವಿತ್ತು.
ಆದರೆ ಈ ಮಗು ಮೃತಪಟ್ಟಿದ್ದು, ಉಸಿರಾಟದ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ತಿಳಿಸಿದ್ದಾರೆ.ಈ ಬಗ್ಗೆ ಅವರ ಸ್ನೇಹಿತೆಗೆ ಅನುಮಾನ ಬಂದಿದೆ. ಮಗುವಿಗೆ ಆಗಾಗ್ಗೆ ರೋಸಿನ್ ಹೊಡೆಯುತ್ತಿದ್ದಳು. ಹಾಗಾಗಿ ಮಗು ಸಾವನ್ನಪ್ಪಿದೆ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಆ ವರದಿ ಬಂದ ಬಳಿಕವಷ್ಟೇ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆಯೇ ಅಥವಾ ಬೇರೆ ಕಾರಣವಿರಬಹುದೇ ಎಂಬುವುದು ಗೊತ್ತಾಗಲಿದೆ.
