Homeರಾಜ್ಯಅತಿ ವೇಗ ತಂದ ಆಪತ್ತು : ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಅತಿ ವೇಗ ತಂದ ಆಪತ್ತು : ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Speeding accident: Engineering student dies

ಬೆಂಗಳೂರು,ಜು.18- ನಿಯಂತ್ರಣ ತಪ್ಪಿ ಬೈಕ್‌ ಉರುಳಿದ ಪರಿಣಾಮ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಂಡರ್‌ಪಾಸ್‌‍ನಲ್ಲಿ ರಾತ್ರಿ ನಡೆದಿದೆ.ವಿಜಯನಗರದ ನಿವಾಸಿ ವರುಣ್‌ (24) ಮೃತಪಟ್ಟ ಎಂಜಿನಿಯರಿಂಗ್‌ ವಿದ್ಯಾರ್ಥಿ.

ಡ್ಯೂಕ್‌ ಬೈಕ್‌ ತೆಗೆದುಕೊಂಡು ಹೊರಗೆ ಹೋಗಿದ್ದ ಅವರು ರಾತ್ರಿ 11.30 ರ ಸುಮಾರಿನಲ್ಲಿ ಮನೆಗೆ ವಾಪಸ್‌‍ ಆಗುತ್ತಿದ್ದಾಗ ಕದಿರೇನಹಳ್ಳಿ ಅಂಡರ್‌ಪಾಸ್‌‍ನಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ವರುಣ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News