Homeಬೆಂಗಳೂರುರೌಡಿಗಳ ಮನೆ ಮೇಲೆ ಪೊಲೀಸರ ದಾಳಿ : ಬಾಲ ಬಿಚ್ಚದಂತೆ ಖಡಕ್‌ ವಾರ್ನಿಂಗ್

ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ : ಬಾಲ ಬಿಚ್ಚದಂತೆ ಖಡಕ್‌ ವಾರ್ನಿಂಗ್

Police raid on rowdy houses

ಬೆಂಗಳೂರು,ಜು.18- ಕಳೆದ ರಾತ್ರಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು 150 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿ ರೌಡಿಗಳಿಗೆ ಬಾಲ ಬಿಚ್ಚದಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.140 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳನೊಳ್ಳಗೊಂಡ 28 ತಂಡಗಳು ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಚ್ಚಗೆ ಮಲಗಿದ್ದ ರೌಡಿಗಳನ್ನು ಮನೆಯಿಂದ ಹೊರಗೆ ಕರೆದು ಚಳಿ ಬಿಡಿಸಿದ್ದಾರೆ. ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಮೊಬೈಲ್‌ ಸಂಖ್ಯೆಯನ್ನು ಪಡೆದುಕೊಂಡು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.ವಾರೆಂಟ್‌, ವಿಚಾರಣೆ ಇದ್ದರೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಹ ರೌಡಿಗಳಿಗೆ ಪೊಲೀಸರು ತಿಳಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ರೌಡಿಗಳು ಬಳಸುತ್ತಿದ್ದ ಕೆಲವು ವಾಹನಗಳಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ 13 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ದಾಳಿ ನಡೆಸಲಾಗಿದೆ.ರಾತ್ರಿ 12 ಗಂಟೆಯಿಂದ ಮುಂಜಾನೆ 4 ಗಂಟೆಯವರೆಗೂ ಈ ದಾಳಿ ನಡೆದಿದೆ.

RELATED ARTICLES
spot_img

Latest News