Homeರಾಷ್ಟ್ರೀಯಮೂರು ರ್‍ಯಾಲಿಗಳ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಹೈ ಅಲರ್ಟ್, ಡ್ರೋನ್‌ ಕಣ್ಗಾವಲು

ಮೂರು ರ್‍ಯಾಲಿಗಳ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಹೈ ಅಲರ್ಟ್, ಡ್ರೋನ್‌ ಕಣ್ಗಾವಲು

ಕೋಲ್ಕತ್ತಾ,ಜು.21- ಹುತಾತ್ಮರ ದಿನಾಚರಣೆಯ ಮೂರು ಏಕಕಾಲಿಕ ರ್ಯಾಲಿಗಳು ಪರಸ್ಪರ ಹತ್ತಿರದಲ್ಲೇ ನಡೆಯುವುದರಿಂದ ಇಂದು ಬೆಳಗ್ಗಿನಿಂದಲೇ ಕೋಲ್ಕತ್ತಾ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ.

ಮೂರು ರ್ಯಾಲಿ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮೂರು ಸ್ಥಳಗಳಲ್ಲಿ ತಲಾ 1,000 ಪೊಲೀಸರನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳನ್ನು ಬಳಸಿ ಕಣ್ಗಾವಲು ಮಾಡಲಾಗುತ್ತಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಿಭಾಗ ಮತ್ತು ದಕ್ಷಿಣ ವಿಭಾಗದ ಮುಖ್ಯಸ್ಥರು ಸೇರಿದಂತೆ ಕನಿಷ್ಠ ಐದು ಉಪ ಆಯುಕ್ತರು ಸಭೆಯ ಸ್ಥಳಗಳಲ್ಲಿ ಇರುತ್ತಾರೆ. ಹೆವಿ ರೇಡಿಯೋ ಫ್ಲೈಯಿಂಗ್‌ ಸ್ಕ್ವಾಡ್‌ (ಎಚ್‌ಆರ್‌ಎಫ್‌ಎಸ್‌‍) ಮತ್ತು ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್‌) ಅನ್ನು ಸಹ ನಿಯೋಜಿಸಲಾಗಿದೆ. ಯಾವುದೇ ಅಶಾಂತಿಯನ್ನು ತಪ್ಪಿಸಲು ಸಾಕಷ್ಟು ಸಂಖ್ಯೆಯ ಕೇಂದ್ರ ಸಶಸ್ತ್ರ ಪೊಲೀಸ್‌‍ ಪಡೆಗಳನ್ನು (ಸಿಎಪಿಎಫ್‌) ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

1993ರಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ ದಿವಂಗತ ಜ್ಯೋತಿಬಸು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪ್ರತಿಭಟನಾ ರ್ಯಾಲಿಯ ಸಂದರ್ಭದಲ್ಲಿ ಪೊಲೀಸ್‌‍ ಗುಂಡಿಗೆ ಪ್ರಾಣ ಕಳೆದುಕೊಂಡ 13 ಯುವ ಕಾಂಗ್ರೆಸ್‌‍ ಕಾರ್ಯಕರ್ತರ ಸರಣಾರ್ಥ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

RELATED ARTICLES
spot_img

Latest News