ಮೈಸೂರು,ಜು.22- ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಸ್ವಲ್ಪಮಟ್ಟಿಗೆ ಏರಿಕೆಯಾಗಿದ್ದು, ಜಲಾಶಯದ ನೀರಿನ ಮಟ್ಟ 2272.65 ಅಡಿಗೆ ತಲುಪಿದೆ.ಜಲಾಶಯದ ಗರಿಷ್ಠ ಮಟ್ಟ 2284.00 ಅಡಿ. ಇಂದಿನ ಮಟ್ಟ 2272.65 ಅಡಿ ಇದ್ದು, ಕಳೆದ ವರ್ಷ ಇದೇ ದಿನ ಇದ್ದ ಮಟ್ಟ 2283.63 ಅಡಿ ಆಗಿತ್ತು.
ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 19.52 ಟಿಎಂಸಿ. ಇಂದಿನ ಸಾಮರ್ಥ್ಯ 13.01 ಟಿಎಂಸಿ ಇದ್ದು, ಕಳೆದ ವರ್ಷ 19.27 ಟಿಎಂಸಿ ಇತ್ತು. ಲೈವ್ ಸಾಮರ್ಥ್ಯ 3.20 ಟಿಎಂಸಿ ಇದ್ದು, ಕಳೆದ ವರ್ಷ 9.46 ಟಿಎಂಸಿ ಇತ್ತು.
ಒಳಹರಿವು ಮತ್ತು ಹೊರಹರಿವು ವಿವರ :
ಒಳಹರಿವು 3132 ಕ್ಯೂಸೆಕ್ (ಕಳೆದ ವರ್ಷ 11746 ಕ್ಯೂಸೆಕ್)- ಹೊರಹರಿವು ನದಿಗೆ 500 ಕ್ಯೂಸೆಕ್ (ಕಳೆದ ವರ್ಷ 12000 ಕ್ಯೂಸೆಕ್)- ಕಾಲುವೆ ಎಡದಂಡೆ ಕಾಲುವೆ – 0 ಕ್ಯೂಸೆಕ್, ಬಲದಂಡೆ ಕಾಲುವೆ – 0 ಕ್ಯೂಸೆಕ್- ಲಿಫ್‌್ಟ 0 ಕ್ಯೂಸೆಕ್- ಒಟ್ಟು ಹೊರಹರಿವು 500 ಕ್ಯೂಸೆಕ್ (ಕಳೆದ ವರ್ಷ 12000 ಕ್ಯೂಸೆಕ್)ಕಳೆದ 24 ಗಂಟೆಯಲ್ಲಿ ಜಲಾನಯನ ಪ್ರದೇಶದಲ್ಲಿ 5 ಎಂಎಂ ಮಳೆಯಾಗಿದೆ.
ಆವಿಯಾಗುವಿಕೆಯಿಂದಾಗಿ 8.36 ಎಂಸಿಎಫ್‌ಟಿ ನೀರಿನ ನಷ್ಟವಾಗಿದೆ. ಜಲಾಶಯದಿಂದ ಕಾಲುವೆಗಳಿಗೆ ನೀರಿನ ಹರಿವನ್ನು ಇನ್ನೂ ಆರಂಭಿಸಿಲ್ಲ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ನೀರಿನ ಬಿಡುಗಡೆ ಮಾಡುವ ಕುರಿತು ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ.
