ಚಿತ್ತೂರು, ಡಿ.12- ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜುದ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಚಿತ್ತೂರಿನಿಂದ ನೆರೆಯ ತೆಲಂಗಾಣಕ್ಕೆ ಹೋಗುತ್ತಿದ್ದ ಬಸ್ ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಬೆಳಿಗ್ಗೆ 4:30 ರ ಸುಮಾರಿಗೆ ದುರ್ಗಾ ದೇವಸ್ಥಾನದ ಬಳಿ ಅಪಘಾತಕ್ಕೀಡಾಗಿದೆ.ಚಾಲಕ ಮತ್ತು ಕ್ಲೀನರ್ ಸೇರಿದಂತೆ ಒಟ್ಟು 37 ಜನರು ಬಸ್‌ನಲ್ಲಿದ್ದರು,ಅಪಘಾತದಿಂದ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 22 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ತಿಳಿಸಿದ್ದಾರೆ.
ಬಸ್ ರಸ್ತೆ ಪಕ್ಕದ ಕಣಿವೆಗೆ ಬಿದ್ದಿಲ್ಲ ಮರಗಿಡದ ಪೊದೆಗೆ ಸಿಕ್ಕಿಕೊಂಡಿದೆ.ಭಾರೀ ಮಂಜು ಕವಿದಿದ್ದ ಪರಿಣಾಮ ಬಸ್ ಚಾಲಕನಿಗೆ ರಸ್ತೆ ತಿರುವು ಕಾಣಿದಿರಬಹುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಪ್ರಯಾಣಿಕರು ಹೋಗುತ್ತಿದ್ದರು ಎಂದು ಬರ್ದಾರ್ ಹೇಳಿದ್ದಾರೆ. ಗಾಯಾಳುಗಳಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ.6 ಮಂದಿ ಯಾವುದೆ ಗಾಯವಿಲ್ಲದೆ ಪಾರಾಗಿದ್ದಾರೆ. ಮೋತುಗುಡೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
