ರಾಜನಂದಗಾಂವ್, ಫೆ. 18 – (ಪಿಟಿಐ)-ಖ್ಯಾತ ಜೈನ ಧರ್ಮದರ್ಶಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರು ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್ಗಢ್ನಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನವನ್ನು ಕೈಗೊಂಡ ನಂತರ ಇಂದು ಕೊನೆಯು ಸಿರೆಳೆದರು. ಸಲ್ಲೇಖನಾ ಎಂಬುದು ಜೈನ ಧಾರ್ಮಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಸ್ವಯಂಪ್ರೇರಿತ ಉಪವಾಸವನ್ನು ಒಳಗೊಂಡಿರುತ್ತದೆ ಎಂದು ತೀರ್ಥರ ಹೇಳಿಕೆ ತಿಳಿಸಿದೆ.
ಆಚಾರ್ಯ ವಿದ್ಯಾಸಾಗರ ಮಹಾರಾಜರು ಬೆಳಗಿನ ಜಾವ 2.35ಗಂಟೆಗೆ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ಮೂಲಕ ಸಮಾ ಪಡೆದರು ಎಂದು ಪ್ರಕಟಣೆ ಹೇಳಿದೆ.ಮಹಾರಾಜರು ಕಳೆದ ಆರು ತಿಂಗಳಿಂದ ಡೊಂಗರಗಢದಲ್ಲಿನ ತೀರ್ಥದಲ್ಲಿ ತಂಗಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಸ್ವಯಂಪ್ರೇರಣೆಯಿಂದ ಉಪವಾಸ ಮಾಡುವ ಧಾರ್ಮಿಕ ಆಚರಣೆಯಾದ ಸಲ್ಲೇಖನವನ್ನು ಕೈಗೊಂಡು ಆಹಾರ ಸೇವನೆಯನ್ನು ತ್ಯಜಿಸಿದ್ದರು. ಜೈನ ಧರ್ಮದ ಪ್ರಕಾರ, ಇದು ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳಲಾದ ಪ್ರತಿಜ್ಞಾಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಗಲಿದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಮೆರವಣಿಗೆ ನಡೆಸಲಾಗುವುದು ಮತ್ತು ಚಂದ್ರಗಿರಿ ತೀರ್ಥದಲ್ಲಿ ಅಂತಿಮ ವಿವಿಧಾನಗಳನ್ನು ನಡೆಸಲಾಗುವುದು.ಕಳೆದ ವರ್ಷ ಛತ್ತೀಸ್ಗಢ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಯಾತ್ರಾ ಸ್ಥಳವಾದ ಡೊಂಗರ್ಗಢಕ್ಕೆ ಭೇಟಿ ನೀಡಿದ್ದರು ಮತ್ತು ನವೆಂಬರ್ 5 ರಂದು ಆಚಾರ್ಯ ವಿದ್ಯಾಸಾಗರ ಮಹಾರಾಜರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ತಮ್ಮ ಶೋಕ ಸಂದೇಶದಲ್ಲಿ, ತಮ್ಮ ಚಲನಶೀಲ ಜಾ್ಞನದಿಂದ ಛತ್ತೀಸ್ಗಢ ಸೇರಿದಂತೆ ದೇಶ ಮತ್ತು ಜಗತ್ತನ್ನು ಶ್ರೀಮಂತಗೊಳಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ್ ಜಿ ಮಹಾರಾಜ್ ಅವರು ದೇಶ ಮತ್ತು ಸಮಾಜಕ್ಕಾಗಿ ಅವರು ಮಾಡಿದ ಅನುಕರಣೀಯ ಕೆಲಸಗಳು, ತ್ಯಾಗ ಮತ್ತು ತಪಸ್ಸು ಯುಗಯುಗಾಂತರಗಳವರೆಗೆ ನೆನಪಿನಲ್ಲಿ ಉಳಿಯುತ್ತಾರೆ. ನಾನು ಆಚಾರ್ಯ ಶ್ರೀ ವಿದ್ಯಾಸಾಗರ್ ಜಿಯವರ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಅವರು ಹೇಳಿದರು.