Friday, November 22, 2024
Homeರಾಷ್ಟ್ರೀಯ | Nationalಲಡಾಕ್‍ಗೆ ರಾಜ್ಯ ಸ್ಥಾನಮಾನ ದೊರೆಯದಿದ್ದರೆ ಅಮರಣಾಂತ ಉಪವಾಸ : ವಾಂಗ್ಚುಕ್

ಲಡಾಕ್‍ಗೆ ರಾಜ್ಯ ಸ್ಥಾನಮಾನ ದೊರೆಯದಿದ್ದರೆ ಅಮರಣಾಂತ ಉಪವಾಸ : ವಾಂಗ್ಚುಕ್

ಲೇಹ್,ಫೆ.20- ಲಡಾಖ್‍ನ ಸಾಂವಿಧಾನಿಕ ರಕ್ಷಣೆಯ ಪ್ರಮುಖ ಪ್ರಚಾರಕ ಸೋನಮ್ ವಾಂಗ್‍ಚುಕ್ ಅವರು ಲಡಾಖ್‍ಗೆ ರಾಜ್ಯ ಸ್ಥಾನಮಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಕೇಂದ್ರದೊಂದಿಗಿನ ಮಾತುಕತೆ ವಿಫಲವಾದರೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.

ಲಡಾಖ್ ಜನರ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಕ್ಕಾಗಿ ನಾವು ಫೆಬ್ರವರಿ 26 ರಂದು ಲೇಹ್ ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಕರೆಯುತ್ತೇವೆ ಅಥವಾ ಮಾತುಕತೆ ವಿಫಲವಾದಲ್ಲಿ ಆಮರಣಾಂತ ಉಪವಾಸವನ್ನು ಮಾಡುತ್ತೇವೆ ಎಂದು ವಾಂಗ್ಚುಕ್ ಪಿಟಿಐಗೆ ತಿಳಿಸಿದ್ದಾರೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಮೊಕ್ಕಾಂ ಹೂಡಿರುವ ಲಡಾಖ್ ನಾಯಕತ್ವವು ನಿನ್ನೆ ಕೇಂದ್ರ ಸರ್ಕಾರದೊಂದಿಗೆ ಹೊಸ ಸುತ್ತಿನ ಮಾತುಕತೆಯ ನಂತರ ಫಾಸ್ಟ್ ಟು ಡೆತ್ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂದು ಘೋಷಿಸಿತ್ತು ಆದರೆ, ಇದೀಗ ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದೆ.

ಬಡತನ, ಹಸಿವು ನಿವಾರಿಸುವ ಯೋಜನೆಗೆ 1 ಮಿಲಿಯನ್ ಡಾಲರ್ ನೇರವು ನೀಡಿದ ಭಾರತ

ಲಡಾಖ್‍ನ ರಾಜ್ಯತ್ವ, ಕೇಂದ್ರಾಡಳಿತ ಪ್ರದೇಶವನ್ನು ಸಂವಿಧಾನದ ಆರನೇ ಶೆಡ್ಯೂಲ್‍ಗೆ ಸೇರಿಸುವುದು ಮತ್ತು ಎತ್ತರದ ಪ್ರದೇಶಕ್ಕೆ ವಿಶೇಷ ಸಾರ್ವಜನಿಕ ಸೇವಾ ಆಯೋಗವನ್ನು ಸ್ಥಾಪಿಸುವ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರವು ಒಪ್ಪಿಕೊಂಡಿದೆ ಎಂದು ಅದು ಹೇಳಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಲಡಾಖ್‍ನ ಉನ್ನತ ಅಧಿಕಾರ ಸಮಿತಿ (ಎಚ್‍ಪಿಸಿ) ಮತ್ತು ಲೇಹ್‍ನ ಅಪೆಕ್ಸ ಬಾಡಿ (ಎಬಿಎಲ್) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಎಬಿಎಲ್) 14 ಸದಸ್ಯರ ನಿಯೋಗದ ನಡುವಿನ ಸಭೆಯಲ್ಲಿ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ.

ಫೆಬ್ರವರಿ 24 ರ ಉಪಸಮಿತಿಯ ಸಭೆ ಮತ್ತು ಫೆಬ್ರವರಿ 25 ರಂದು ನಮ್ಮ ನಾಯಕರು ಲೇಹ್‍ಗೆ ಹಿಂದಿರುಗುವವರೆಗೆ ನಾವು ಕಾಯುತ್ತೇವೆ. ಮರುದಿನ ಲೇಹ್ ನಗರದಲ್ಲಿ ನಾವು ಬಹಳ ದೊಡ್ಡ ಸಾರ್ವಜನಿಕ ಸಭೆಯನ್ನು ಕರೆಯುತ್ತೇವೆ, ನಮ್ಮ ಬೇಡಿಕೆಗಳನ್ನು ಪೂರೈಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅಥವಾ ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಆಮರಣಾಂತ ಉಪವಾಸವನ್ನು ಆರಂಭಿಸುತ್ತೇವೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ವಾಂಗ್ಚುಕ್ ಹೇಳಿದ್ದಾರೆ.

RELATED ARTICLES

Latest News