Friday, November 22, 2024
Homeರಾಷ್ಟ್ರೀಯ | Nationalನೆಲದಡಿ ಕುಕ್ಕರ್‌ನಲ್ಲಿ ಅಡಗಿಸಿಟ್ಟಿದ 2 ಕೆಜಿ ಸ್ಪೋಟಕ ವಶ

ನೆಲದಡಿ ಕುಕ್ಕರ್‌ನಲ್ಲಿ ಅಡಗಿಸಿಟ್ಟಿದ 2 ಕೆಜಿ ಸ್ಪೋಟಕ ವಶ

ಗಡ್ಚಿರೋಲಿ, ಫೆ.20 (ಪಿಟಿಐ) ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅರಣ್ಯದಲ್ಲಿ ನಕ್ಸಲೀಯರು ನೆಲದಡಿಯಲ್ಲಿ ಪ್ರೆಶರ್ ಕುಕ್ಕರ್‍ನಲ್ಲಿ ಅಡಗಿಸಿಟ್ಟಿದ್ದ ಎರಡು ಕಿಲೋಗ್ರಾಂಗಳಷ್ಟು ಸ್ಪೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುರ್ಖೇಡ ತಾಲೂಕಿನ ಗೊಂಡರಿ ಅರಣ್ಯದಲ್ಲಿ ಪೊಲೀಸರಿಗೆ ಹಾನಿ ಮಾಡುವ ಉದ್ದೇಶದಿಂದ ನಕ್ಸಲೀಯರು ಅಪಾರ ಪ್ರಮಾಣದ ಸ್ಪೋಟಕಗಳು ಮತ್ತು ಇತರ ವಸ್ತುಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಗಡ್ಚಿರೋಲಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಬಾಂಬ್ ಪತ್ತೆ ಮತ್ತು ಬಿಸಾಡಬಹುದಾದ ಸ್ಕ್ವಾಡ್‍ಗಳಿಗೆ (ಬಿಡಿಡಿಎಸ್) ಸೂಚಿಸಲಾಗಿದೆ. ನಿನ್ನೆ ನಡೆದ ಶೋಧದ ವೇಳೆ, ಎರಡು ಅಡಿ ನೆಲದ ಕೆಳಗೆ ಅಡಗಿಸಿಟ್ಟಿದ್ದ ಪ್ರೆಶರ್ ಕುಕ್ಕರ್‍ನಲ್ಲಿ ಎರಡು ಕೆಜಿ ಸ್ಪೋಟಕಗಳನ್ನು ಪ್ಯಾಕ್ ಮಾಡಿರುವುದು ಬಿಡಿಡಿಎಸ್ ಪತ್ತೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಬಿಡಿಡಿಎಸ್ ಸೋಟಕಗಳನ್ನು ಸ್ಥಳದಲ್ಲೇ ನಾಶಪಡಿಸಿದೆ ಎಂದು ಅದು ಹೇಳಿದೆ.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಜಿ.ಟಿ.ದೇವೇಗೌಡ

ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಗಡ್ಚಿರೋಲಿ ಎಸ್ಪಿ ನೀಲೋತ್ಪಾಲ್ ತಿಳಿಸಿದ್ದಾರೆ.

RELATED ARTICLES

Latest News