Homeರಾಷ್ಟ್ರೀಯಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಪೆಲೆಟ್‌ ಗನ್‌ಗಳು, ಎಲೆಕ್ಟ್ರಿಕ್‌ ಶಾಕ್‌ ಲಾಠಿಗಳ ಬಳಕೆ ಸಂಪೂರ್ಣ ನಿಷೇಧ

ಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಪೆಲೆಟ್‌ ಗನ್‌ಗಳು, ಎಲೆಕ್ಟ್ರಿಕ್‌ ಶಾಕ್‌ ಲಾಠಿಗಳ ಬಳಕೆ ಸಂಪೂರ್ಣ ನಿಷೇಧ

Pellet Guns, Electric Shock Batons Banned In Delhi Protests After RAF Flags 'Serious Lapses'

ನವದೆಹಲಿ,ಜು.25- ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ಕ್ಷಿಪ್ರ ಕಾರ್ಯಪಡೆ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಹಾಗೂ ಕಾರ್ಯಾಚರಣೆಯ ನ್ಯೂನತೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಸಿಆರ್‌ಪಿಎಫ್‌ ಮತ್ತು ಆರ್‌ಎಎಫ್‌ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮುಂದಿನ ಆದೇಶದವರೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಪ್ರತಿಭಟನೆ ಹಾಗೂ ಜನಸಂದಣಿ ನಿಯಂತ್ರಣದ ವೇಳೆ ಪೆಲೆಟ್‌ ಗನ್‌ಗಳು, ಎಲೆಕ್ಟ್ರಿಕ್‌ ಶಾಕ್‌ ಲಾಠಿಗಳು ಮತ್ತು ಮಾರಕವಲ್ಲದ ಆಯುಧಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಜುಲೈ 20 ರಂದು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ನಿರ್ವಹಣೆಯಲ್ಲಿ ಭಾರೀ ಲೋಪಗಳು ಎದುರಾಗಿದ್ದವು. ಈ ಕುರಿತು ಜುಲೈ 22 ರಂದು ಇನ್‌ಸ್ಪೆಕ್ಟರ್‌ ಜನರಲ್‌ ಸೀಮಾ ಧುಂಡಿಯಾ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಆರ್‌ಎಎಫ್‌ ಅಧಿಕಾರಿಗಳ ವೀಡಿಯೊ ಸಮೇಳನ ನಡೆಯಿತು.

ಈ ಸಭೆಯಲ್ಲಿ ಪೊಲೀಸ್‌‍ ಪಡೆಯ ಪಾತ್ರದ ಬಗ್ಗೆ ಗಂಭೀರ ಆತಾವಲೋಕನ ನಡೆಸಲಾಗಿದ್ದು, ಕರ್ತವ್ಯದಲ್ಲಿ ಎಸಗಿದ ಎಡವಟ್ಟುಗಳನ್ನು ಒಪ್ಪಿಕೊಳ್ಳಲಾಗಿದೆ. ಅಲ್ಲದೆ, ಜನಸಂದಣಿ ನಿಯಂತ್ರಣ, ಶಿಸ್ತು ಹಾಗೂ ಹೊಣೆಗಾರಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ 26 ಪ್ರಮುಖ ಸರಿಪಡಿಸುವ ಕ್ರಮಗಳನ್ನು ಘೋಷಿಸಲಾಗಿದೆ.

ಆಯುಧಗಳ ನಿಷೇಧ :
ಮುಂದಿನ ಸೂಚನೆ ಬರುವವರೆಗೆ ಪ್ರೊಜೆಕ್ಟೈಲ್‌ ಅಟ್ಯಾಕ್‌ ಗನ್‌ಗಳು, ಆ್ಯಂಟಿ-ಗಲಭೆ ಗನ್‌ಗಳು, ಎಲೆಕ್ಟ್ರಿಕ್‌ ಶಾಕ್‌ ವೆಪನ್‌ಗಳು ಮತ್ತು ಎಲೆಕ್ಟ್ರಿಕ್‌ ಶೀಲ್‌್ಡಗಳ ಬಳಕೆ ಹಾಗೂ ನಿಯೋಜನೆಯನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ.ಪ್ರತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಬಾಡಿ-ವಾರ್ನ್‌ ಕ್ಯಾಮೆರಾಗಳನ್ನು ಧರಿಸಬೇಕು. ಪ್ರಮುಖ ಘಟನೆಗಳ ವಿಶೇಷ ವೀಡಿಯೊಗ್ರಫಿ ಹಾಗೂ ಗುಪ್ತಚರ ಮೇಲ್ವಿಚಾರಣೆಯನ್ನು ಬಲಪಡಿಸಲು ಸೂಚಿಸಲಾಗಿದೆ.

ಜನಸಂದಣಿಯಿಂದ ದೂರ ಸರಿದ ವ್ಯಕ್ತಿಗಳ ಮೇಲೆ ಬಲಪ್ರಯೋಗ ಮಾಡುವುದು, ಉದ್ದೇಶಪೂರ್ವಕವಾಗಿ ಜನರನ್ನು ನೆಲಕ್ಕೆ ತಳ್ಳುವುದು ಮತ್ತು ಬ್ಯಾರಿಕೇಡ್‌ಗಳ ಹೊರಗೆ ನಿಂತವರನ್ನು ಹೊಡೆಯುವುದನ್ನು ಸಭೆಯು ತೀವ್ರವಾಗಿ ಖಂಡಿಸಿದೆ.

ಆರ್‌ಎಎಫ್‌ ಪರಿವರ್ತನಾ ತರಬೇತಿಯನ್ನು ಪಡೆಯದ ಸಿಬ್ಬಂದಿಯನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಜನಸಂದಣಿ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ನಿಯೋಜಿಸಿದರೂ ಅವರಿಗೆ ಮೊದಲು ಕಾರ್ಯಾಚರಣೆಯ ಬಗ್ಗೆ ಸಂಪೂರ್ಣ ಬ್ರೀಫಿಂಗ್‌ ನೀಡಬೇಕು.

ಜಮು ಮತ್ತು ಕಾಶೀರದಂತಹ ದಂಗೆ ನಿಗ್ರಹ ವಲಯಗಳಿಂದ ವರ್ಗಾವಣೆಗೊಂಡು ಬರುವ ಸಿಬ್ಬಂದಿಗಳಿಗೆ ಆರ್‌ಎಎಫ್‌ನ ಜನಸಂದಣಿ ನಿಯಂತ್ರಣ ತತ್ವಶಾಸ್ತ್ರ ಮತ್ತು ಸೂಕ್ಷ್ಮ ಪೊಲೀಸ್‌‍ ಕುರಿತು ತರಬೇತಿ ನೀಡುವವರೆಗೆ ಅವರನ್ನು ಪ್ರತಿಭಟನಾ ಸ್ಥಳಗಳಲ್ಲಿ ನಿಯೋಜಿಸಬಾರದು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕೆಲ ಆರ್‌ಎಎಫ್‌ ಸಿಬ್ಬಂದಿ ಕಡ್ಡಾಯ ರಕ್ಷಣಾ ಪರಿಕರಗಳಾದ ಹೆಲೆಟ್‌ ಮತ್ತು ಬಾಡಿ ಪ್ರೊಟೆಕ್ಟರ್‌ಗಳಿಲ್ಲದೆ ನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇದಕ್ಕೆ ಉನ್ನತಾಧಿಕಾರಿಗಳು, ಭವಿಷ್ಯದಲ್ಲಿ ಪ್ರತಿ ಸಿಬ್ಬಂದಿಯೂ ಸರಿಯಾಗಿ ಅಳವಡಿಸಲಾದ ಹೆಲೆಟ್‌ ವಿಸರ್‌ಗಳು ಹಾಗೂ ಸಂಪೂರ್ಣ ರಕ್ಷಣಾ ಕವಚಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.ಜಂತರ್‌ ಮಂತರ್‌ ಘಟನೆಯು ಭದ್ರತಾ ಸಿಬ್ಬಂದಿಯ ಕಾರ್ಯ ವೈಖರಿಗೆ ಕನ್ನಡಿ ಹಿಡಿದಿದ್ದು, ಭವಿಷ್ಯದಲ್ಲಿ ಇಂತಹ ಅತಿರೇಕದ ಅಥವಾ ಅನಗತ್ಯ ಬಲಪ್ರಯೋಗಗಳು ಮರುಕಳಿಸದಂತೆ ತಡೆಯಲು ಆರ್‌ಎಎಫ್‌ ಆಡಳಿತ ಮಂಡಳಿಯು ಈ ಕಠಿಣ ಹೆಜ್ಜೆಗಳನ್ನು ಇಟ್ಟಿದೆ.

RELATED ARTICLES

Latest News