ಬೆಂಗಳೂರು,ಫೆ.21-ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವುದು ಮುಂಬರುವ ಲೋಕಸಭೆ ಚುನಾವಣೆಗೂ ಇದು ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್‍ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಉತ್ತರ ನೀಡಿದ ಅವರು, ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆದ್ದಿರುವುದು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಜನ ಸಾರಾಸಗಾಟಾಗಿ ತಿರಸ್ಕಾರ ಮಾಡಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ನೀವು ಏನೇ ಮೈತ್ರಿ ಮಾಡಿಕೊಂಡರೂ ಕರ್ನಾಟಕದ ಜನ ನಿಮ್ಮನ್ನು ಒಪ್ಪುವುದಿಲ್ಲ ಎಂಬುದು ಫಲಿತಾಂಶದಿಂದಲೆ ಸಾಬೀತಾಗಿದೆ. ಲೋಕಸಭೆ ಚುನಾವಣೆಯಲ್ಲಿ ನಾವು ನಿಮ್ಮ ಮೈತ್ರಿಯನ್ನು ಮಣಿಸಿ ಹೆಚ್ಚಿನ ಸ್ಥಾನವನ್ನು ಗೆಲ್ಲಲಿದ್ದೇವೆ. ಕರ್ನಾಟಕ ಜನ ಎಂದಿಗೂ ಕೋಮುವಾದವನ್ನು ಒಪ್ಪುವುದಿಲ್ಲ ಎಂದು ಜೆಡಿಎಸ್-ಬಿಜೆಪಿ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. ಪುಟ್ಟಣ್ಣನವರ ಫಲಿತಾಂಶ ನಿಮಗೆ ಎಚ್ಚರಿಕೆಯ ಗಂಟೆ. ನೀವಿಬ್ಬರೂ ಮೈತ್ರಿಯಾದರೂ ಶಿಕ್ಷಕರ ಕ್ಷೇತ್ರದಲ್ಲಿ ಸೋಲು ಅನುಭವಿಸಲಿದ್ದೀರಿ. ಮುಂದಿನ ಚುನಾವಣೆಗಳಿಗೂ ಇದು ಮಾರ್ಗಸೂಚಿಯಾಗಲಿದೆ ಎಂದು ಎಚ್ಚರಿಸಿದರು.
ಕಳೆದ 10 ವರ್ಷಗಳಲ್ಲಿ 13 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಬೊಮ್ಮಾಯಿ
ಆಗ ಬಿಜೆಪಿಯ ರವಿಕುಮಾರ್ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ ಸೇರಿದಂತೆ ಅನೇಕ ಕಡೆ ಕಾಂಗ್ರೆಸ್ ಸೋತಿದೆ. ಅಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದಿದೆ. ಹಾಗಾದರೆ ಇದು ಯಾವ ಮುನ್ಸೂಚನೆಯನ್ನು ನೀಡುತ್ತದೆ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನೀವು ಕರ್ನಾಟಕದ ಬಗ್ಗೆ ಮಾತನಾಡಿ, ಅಲ್ಲಿನ ರಾಜ್ಯಗಳ ಫಲಿತಾಂಶದ ಬಗ್ಗೆ ಮಾತನಾಡುವುದು ಬೇಡ. ಮೊದಲು ಕರ್ನಾಟಕದ ಬಗ್ಗೆ ಮಾತನಾಡಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಹೇಳಿದರು.
ಪುಟ್ಟಣ್ಣ 1500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಸೋಲಾಗಿದೆ. ನಾವು ನಿಮ್ಮ ಹಾಗೆ ಸುಳ್ಳು ಹೇಳುವುದಿಲ್ಲ. 28ರ ಪೈಕಿ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ಆಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರದು ವೈಯಕ್ತಿಕ ಗೆಲುವು. ಈ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಸ್ಥಳೀಯ ವಿಷಯಗಳ ಮೇಲೆ ನಡೆದಿರುತ್ತದೆ. ನಾವು 28ರಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಇದಕ್ಕೆ ಸಿದ್ದರಾಮಯ್ಯನವರು, ಓಯ್ ಸುಮ್ಮನೆ ಕುತ್ಕೊಳಪ್ಪ, ನೀನು ದಕ್ಷಿಣಕನ್ನಡ ಕ್ಷೇತ್ರದಲ್ಲಿ ನಿಂತ್ಕೋ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.
ನೀವು ನಿಂತುಕೊಳ್ಳಿ. ಗೆದ್ದು ಲೋಕಸಭೆಗೆ ಹೋಗಿ ಚರ್ಚೆ ಮಾಡಲು ಸಮರ್ಥರಿದ್ದೀರಾ ಎಂದು ಪ್ರಶ್ನಿಸಿದರು.
ನಾನು ಇಲ್ಲಿದ್ದರೂ ಸಮರ್ಥನೆ, ಲೋಕಸಭೆಗೆ ಹೋದರೂ ಸಮರ್ಥನೆ. ಅಂತಾರಾಷ್ಟ್ರೀಯ ಸಂಸ್ಥೆಗೆ ಹೋದರೂ ಅಲ್ಲಿಯೂ ಸಮರ್ಥನಿದ್ದೇನೆ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು. ಈ ವೇಳೆ ನೂತನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಬಿಜೆಪಿ ಬಿಡಲು ಕಾರಣ ಏನೆಂಬುದನ್ನು ಸದನದಲ್ಲಿ ಬಹಿರಂಗಪಡಿಸಿದರು.
ನಾನು ಬಿಜೆಪಿ ಬಿಡಲು ಏನು ಕಾರಣ ಗೊತ್ತಾ.. ಹಿಂದಿನ ಬಿಜೆಪಿ ಸರ್ಕಾರದಲ್ಲಿ 140 ದಿನ ಅನುದಾನಿತ ಕಾಲೇಜಿನ ಶಿಕ್ಷಕರು ಧರಣಿ ಮಾಡಿದರು. ಮೂರು ಮಂದಿ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡ್ರು. ಈ ವೇಳೆ ನಾನು, ಸಂಕನ್ಹೂರ್ ಶಿಕ್ಷಕರ ಸಚಿವರ ಜೊತೆ ಸಭೆ ಮಾಡಿ ಎಂದು ಹೇಳಿದ್ದೆ.
ಸರ್ಕಾರದಿಂದ ಕಂದಾಯ ವೆಚ್ಚ ದುರ್ಬಳಕೆ : ಬೊಮ್ಮಾಯಿ ಆರೋಪ
3 ಮಂದಿ ಶಿಕ್ಷಕರು ಸಾವನ್ನಪ್ಪಿದ್ದಾರೆ, ಇನ್ನು ಕೆಲವರು ಸಾವನ್ನಪ್ಪುವ ಸಾಧ್ಯತೆ ಇದೆ. ಸಭೆ ಮಾಡಿ ಅವರಿಗೆ ಸಾಂತ್ವನ ಹೇಳಿ ಎಂದು ಮನವಿ ಮಾಡಿದ್ದೆ, ಆದರೆ ಸಭೆ ಮಾಡೊಲ್ಲ ಎಂದು ಸಚಿವರು ಹೇಳಿದ್ರು. ಆ ಕ್ಷಣದಲ್ಲೆ ನಿರ್ಧಾರ ಮಾಡ್ದೆ, ಈ ಪಕ್ಷದಲ್ಲಿ ನಾನು ಇರೊದಿಲ್ಲ ಎಂದು. ಈ ಬಾರಿ ಕಾಂಗ್ರೆಸ್‍ನಿಂದ ನಿಂತು ಗೆಲುವು ಸಾಧಿಸಿದ್ದೇನೆ. ಶಿಕ್ಷಕರು ನನ್ನ ಕೈ ಹಿಡಿದಿದ್ದಾರೆ ಎಂದು ಹೇಳಿದರು.