Sunday, April 28, 2024
Homeರಾಜ್ಯಸರ್ಕಾರದಿಂದ ಕಂದಾಯ ವೆಚ್ಚ ದುರ್ಬಳಕೆ : ಬೊಮ್ಮಾಯಿ ಆರೋಪ

ಸರ್ಕಾರದಿಂದ ಕಂದಾಯ ವೆಚ್ಚ ದುರ್ಬಳಕೆ : ಬೊಮ್ಮಾಯಿ ಆರೋಪ

ಬೆಂಗಳೂರು,ಫೆ.21- ಕರ್ನಾಟಕ ಸರ್ಕಾರ ಆದಾಯಕ್ಕಿಂತಲೂ ಶೇ.103 ರಷ್ಟು ಕಂದಾಯ ವೆಚ್ಚವನ್ನು ಬಳಕೆ ಮಾಡುವುದಾಗಿ ಹೇಳುವ ಮೂಲಕ ನಾಡಿನ ಆರ್ಥಿಕ ಶಿಸ್ತನ್ನು ಹಾಳುಗೆಡವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಅಂಕಿ ಅಂಶಗಳ ಸಹಿತ ವಿಧಾನಸಭೆಯಲ್ಲಿಂದು ಬಜೆಟ್‍ನ ಲೋಪದೋಷಗಳ ವಿಶ್ಲೇಷಣೆ ನಡೆಸಿದ ಅವರು, ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ನೀಡಬೇಕು. ಆದರೆ ಅದಕ್ಕೆ ಪೂರಕವಾದ ಆದಾಯವೂ ಅಗತ್ಯವಿದೆ.

ಈ ಬಜೆಟ್‍ನಲ್ಲಿ ಯೋಜನೆ ಆಧರಿತ ವೆಚ್ಚಗಳಡಿ ಶೇ.42 ರಷ್ಟು ಖರ್ಚು ಮಾಡಲಾಗುತ್ತಿದೆ. ಇದು ಪಂಚಖಾತ್ರಿಯಂತಹ ಯೋಜನೆಗಳಿಗೆ ಬಳಕೆಯಾಗುತ್ತಿದೆ ಮತ್ತು ನಿರಂತರವಾಗಿ ವೆಚ್ಚಗಳ ಬಾಬ್ತಾಗಿರುವ ವೇತನ, ಪಿಂಚಣಿ, ಸಾಲ ಮತ್ತು ಬಡ್ಡಿ ಪಾವತಿಗಳಿಗೆ ಶೇ.61 ರಷ್ಟು ಕಂದಾಯ ವೆಚ್ಚ ನಿಗದಿಯಾಗಿದೆ.

ಕಳೆದ ಬಜೆಟ್‍ಗಳಲ್ಲಿ ಇದು ಶೇ.56 ಮತ್ತು ಶೇ.48 ರಷ್ಟಿತ್ತು. ಪ್ರಸ್ತುತ ಯೋಜನೇತರ ಮತ್ತು ಯೋಜನೇತರ ಆಧರಿತ ವೆಚ್ಚಗಳಿಂದ ಶೇ.61ರಷ್ಟು ಬಳಕೆಯಾಗುತ್ತಿದೆ. ಬಂಡವಾಳ ವೆಚ್ಚವನ್ನು ಹಿಂದಿನ ವರ್ಷಕ್ಕಿಂತಲೂ 1 ಸಾವಿರ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 55 ಸಾವಿರ ಕೋಟಿ ರೂ.ಗಳಿಗೆ ನಿಗದಿ ಮಾಡಿದ್ದಾರೆ ಎಂದು ವಿವರಿಸಿದರು. ಕಂದಾಯ ಇಲಾಖೆಯ ಮುದ್ರಾಂಕ ಶುಲ್ಕ, ಅಬಕಾರಿ ಹಾಗೂ ಮೋಟಾರು ವಾಹನ ತೆರಿಗೆ ಹೆಚ್ಚಳದಿಂದ 13 ಸಾವಿರ ಕೋಟಿ ರೂ.ಗಳು ಹೆಚ್ಚುವರಿ ಹಣ ಸಂದಾಯವಾಗುತ್ತಿದೆ. ಈ ಹಿಂದೆ ತಮ್ಮ ಸರ್ಕಾರ 8 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹಿಸಿತ್ತು.

ಒಟ್ಟಾರೆ ಹೆಚ್ಚುವರಿಯಾದ 26 ಸಾವಿರ ಕೋಟಿ ರೂ.ಗಳು ಕಂದಾಯ ವೆಚ್ಚಕ್ಕೆ ಬಳಕೆಯಾಗುತ್ತಿವೆ ಎಂದು ವಿವರಿಸಿದರು. 7ನೇ ವೇತನ ಆಯೋಗಕ್ಕೆ 20 ಸಾವಿರ ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಅದನ್ನು ಈ ಬಜೆಟ್‍ನಲ್ಲಿ ಎಲ್ಲಿಯೂ ನಮೂದಿಸಿಲ್ಲ. ಕಂದಾಯ ವೆಚ್ಚವೇ ದುಬಾರಿಯಾಗಿರುವುದರಿಂದ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದರು.

ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಬ್ರೇಕ್

ಈ ಸರ್ಕಾರ 1.05 ಲಕ್ಷ ಕೋಟಿ ರೂ.ಗಳ ಸಾಲ ಮಾಡುತ್ತಿದೆ. ಸಾಲವನ್ನು ಬಂಡವಾಳ ವೆಚ್ಚದ ಬದಲಾಗಿ ಕಂದಾಯ ವೆಚ್ಚ ವಾಗಿ ಬಳಕೆ ಮಾಡುತ್ತಿರುವುದು ಸರಿಯಲ್ಲ. ಸಾಲದ ಬಾಬ್ತಿನಲ್ಲೂ ಶೇ.90 ರಷ್ಟನ್ನು ಮಾರುಕಟ್ಟೆ ಮೂಲಗಳಿಂದ ದುಬಾರಿ ಬಡ್ಡಿದರದಲ್ಲಿ ಸಂಗ್ರಹಿಸಲಾಗುತ್ತಿದೆ. ಇದು ರಾಜ್ಯದ ಆರ್ಥಿಕತೆಗೆ ಭಾರೀ ಹಾನಿಯನ್ನುಂಟು ಮಾಡಲಿದೆ ಎಂದು ಎಚ್ಚರಿಸಿದರು.

ಸಂಪನ್ಮೂಲ ಕ್ರೋಡೀಕರಣದಲ್ಲಿ 12 ಸಾವಿರ ಕೋಟಿ ರೂ. ಕೊರತೆಯಾಗಿದೆ. ತತ್ಸಮಾನವಾಗಿ ವೆಚ್ಚದಲ್ಲೂ ಕೂಡ 10 ಸಾವಿರ ಕೋಟಿ ರೂ. ಕಡಿಮೆಯಿದೆ. ಸಾಮಾಜಿಕ ಸೇವೆಗೆ 96 ಸಾವಿರ ಕೋಟಿ ರೂ. ನಿಗದಿ ಮಾಡಿದ್ದಾರೆ. ಆರ್ಥಿಕ ವೆಚ್ಚಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು. ವಿದೇಶಿ ಬಂಡವಾಳ ಹೂಡಿಕೆ ಶೇ. 40 ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ನೋಂದಣಿಯಾಗಿದ್ದ 30 ಕಂಪನಿಗಳು ಸಿಂಗಾಪುರ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹೋಗಿವೆ. ಈ ರೀತಿಯ ಕಂಪನಿಗಳಿಂದಲೇ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿತ್ತು ಎಂದರು.

ಆರ್ಥಿಕತೆಯಲ್ಲಿ ಸಾಮಥ್ರ್ಯ ಮತ್ತು ಹಂಚಿಕೆ ಸರಿಸಮಾನವಾಗಿರಬೇಕು. ತೆರಿಗೆ ಸಂಗ್ರಹ ಸಾಮಥ್ರ್ಯ ದಕ್ಷವಾಗಿರುವುದರ ಜೊತೆಗೆ ಹಂಚಿಕೆಯಲ್ಲೂ ಅಷ್ಟೇ ನ್ಯಾಯಯುತವಾಗಿರಬೇಕು. ಹೀಗಿದ್ದಾಗ ಮಾತ್ರ ಆರ್ಥಿಕತೆ ಸಮಾನವಾಗಿರುತ್ತದೆ. ಆದರೆ ರಾಜ್ಯದಲ್ಲಿ ಅದು ಕಂಡುಬರುತ್ತಿಲ್ಲ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ : ಕಾಂಗ್ರೆಸ್ ಸರ್ಕಾರದ ಮತ್ತೊಂದು ಎಡವಟ್ಟು

ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ರಾಜ್ಯಸರ್ಕಾರ ನಾಡಿನ ಮೂಲ ಸೌಕರ್ಯಾಭಿವೃದ್ಧಿಯಲ್ಲಿ ಕೇಂದ್ರದ ಕೊಡುಗೆಗಳನ್ನು ಮರೆಮಾಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈಲ್ವೆ, ಸ್ಮಾರ್ಟ್ ಸಿಟಿಗೆ ತಲಾ 7 ಸಾವಿರ ಕೋಟಿ ರೂ., ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್ ಸೇರಿದಂತೆ ಹಲವು ಬಾಬ್ತುಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದಾಯ, ಕಸ್ಟಮ್ಸ್ ಮತ್ತು ವೃತ್ತಿ ತೆರಿಗೆಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲವನ್ನು ಕೇಂದ್ರ, ರಕ್ಷಣೆ, ರೈಲ್ವೆಯಂತಹ ತನ್ನದೇ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

RELATED ARTICLES

Latest News