Wednesday, May 1, 2024
Homeಇದೀಗ ಬಂದ ಸುದ್ದಿಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ : ಕಾಂಗ್ರೆಸ್ ಸರ್ಕಾರದ ಮತ್ತೊಂದು ಎಡವಟ್ಟು

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ : ಕಾಂಗ್ರೆಸ್ ಸರ್ಕಾರದ ಮತ್ತೊಂದು ಎಡವಟ್ಟು

ಬೆಂಗಳೂರು, ಫೆ.21- ಸರ್ಕಾರ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಲೇ ಇದೆ. `ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಶೀರ್ಷಿಕೆಯನ್ನು ಬದಲಾವಣೆ ಮಾಡಿ ಕೈ ಸುಟ್ಟುಕೊಂಡ ಬೆನ್ನಲ್ಲೇ ಈಗ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ನೀಡುವ ಮೂಲಕ ಮತ್ತೊಂದು ಎಡವಟ್ಟು ಮಾಡಿ ನಗೆಪಾಟಲಿಗೀಡಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆಯನ್ನು ಹಾಡಬೇಕು. ಖಾಸಗಿ ಶಾಲೆಗಳಲ್ಲಿ ಕಡ್ಡಾಯವಿಲ್ಲ ಎಂಬ ಆದೇಶವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೀಡುವ ಮೂಲಕ ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡಿದೆ.

ಈ ಆದೇಶ ಹೊರ ಬೀಳುತ್ತಿದ್ದಂತೆ ಮಾಧ್ಯಮಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ನಾಡಗೀತೆ ಹಾಡುವುದಕ್ಕೂ ಶಾಲೆಗಳನ್ನು ಸರ್ಕಾರಿ, ಖಾಸಗಿ ಎಂದು ವಿಂಗಡಿಸಬೇಕೇ? ಇದು ಯಾವ ನಿಯಮವೆಂದು ಪ್ರಶ್ನಿಸುತ್ತಿದ್ದಂತೆ ವಿಧಾನಸೌಧದಲ್ಲಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಡಬಡಾಯಿಸುತ್ತ ಸ್ಪಷ್ಟನೆ ನೀಡಿದ್ದಾರೆ.

ಬಿಹಾರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು

ನಮಗೆ ಎಲ್ಲಾ ಶಾಲೆಗಳು ಒಂದೇ. ಪ್ರಿಂಟಿಂಗ್ ಮಿಸ್ಟೇಕ್ ಆಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಸಮಜಾಯಿಷಿ ನೀಡಿದ್ದಾರೆ. ನಾವು ಆ ರೀತಿಯ ಯಾವುದೇ ಕಾನೂನು ಮಾಡಿಲ್ಲ. ಆ ರೀತಿಯ ಸುತ್ತೋಲೆ ಬಂದಿದ್ದರೆ ತಕ್ಷಣವೇ ಅದನ್ನು ಸರಿಪಡಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಮಾಡಿ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿರುವ ಈ ಆದೇಶ ವ್ಯಾಪಕ ಚರ್ಚೆಗೊಳಗಾಗುವುದರೊಳಗೆ ಎಚ್ಚೆತ್ತ ಸರ್ಕಾರ ಸರಿಪಡಿಸಿಕೊಳ್ಳಲು ಮುಂದಾಯಿತು. ಇದೇ ರೀತಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News