Monday, April 22, 2024
Homeರಾಜ್ಯಇದ್ದಕ್ಕಿದ್ದಂತೆ ಹೊತ್ತಿ ಉರಿದ ಹೊಸ ಕಾರು

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಹೊಸ ಕಾರು

ಮಹದೇವಪುರ,ಫೆ.21- ಮನೆ ಮುಂದೆ ಪಾರ್ಕಿಂಗ್ ಮಾಡಲಾಗಿದ್ದ ಹೊಸ ಕಾರು ಸುಟ್ಟು ಕರಕಲಾಗಿರುವ ಘಟನೆ ಕಾಡುಬಿಸನಹಳ್ಳಿಯಲ್ಲಿ ನಡೆದಿದೆ. ಸಂಪತ್ ಕುಮಾರ್ ಎಂಬುವವರು ಮಾರುತಿ ಕಂಪೆನಿಯ ಹೊಸ ಕಾರನ್ನು ಖರೀದಿಸಿ ಮೂರು ತಿಂಗಳಾಗಿತ್ತು. ಮನೆ ಮುಂದೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ನೋಡುವಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಹೊತ್ತಿ ಉರಿದಿದೆ.

ಬೆಂಕಿಯನ್ನು ನಂದಿಸಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಗ್ನಿ ಅವಘಡದಿಂದ ಕಾರಿನಲ್ಲಿದ್ದ ಕೆಲವು ದಾಖಲೆಗಳು ಸೇರಿದಂತೆ ಪಾರ್ಕಿಂಗ್‍ನಲ್ಲಿದ್ದ ವಾಷಿಂಗ್ ಮೆಷಿನ್, ಬಟ್ಟೆಗಳು, ಮನೆಯ ಕಿಟಕಿ, ಬಾಗಿಲು ಹಾಗೂ ಮೇಲ್ಛಾವಣಿ ಬೆಂಕಿಯಿಂದ ಸುಟ್ಟು ಹಾನಿಯಾಗಿದ್ದು, ಸುಮಾರು 17 ಲಕ್ಷ ರೂ.ಗಳಷ್ಟು ನಷ್ಟವಾಗಿದೆ.

ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ : ಸಿದ್ದರಾಮಯ್ಯ

ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಾರು ಕಂಪೆನಿಯವರು ಸೂಕ್ತ ಪರಿಹಾರ ನೀಡಬೇಕೆಂದು ಕಾರಿನ ಮಾಲೀಕರು ಒತ್ತಾಯಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಅಗ್ನಿಯನ್ನು ನಂದಿಸಲಾಗಿದ್ದು, ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Latest News