Friday, November 22, 2024
Homeಬೆಂಗಳೂರುಬಿಬಿಎಂಪಿ ಬಜೆಟ್‍ಗೆ ದಿನಗಣನೆ : ಎಸ್‍ಎಎಸ್ ತೆರಿಗೆ ಪದ್ಧತಿಗೆ ಕೊಕ್ ಸಾಧ್ಯತೆ

ಬಿಬಿಎಂಪಿ ಬಜೆಟ್‍ಗೆ ದಿನಗಣನೆ : ಎಸ್‍ಎಎಸ್ ತೆರಿಗೆ ಪದ್ಧತಿಗೆ ಕೊಕ್ ಸಾಧ್ಯತೆ

ಬೆಂಗಳೂರು,ಫೆ.23- ರಾಜ್ಯ ಬಜೆಟ್ ಮಂಡನೆಯಾದ ಬೆನ್ನಲ್ಲೇ ಬಿಬಿಎಂಪಿ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಜನಪ್ರತಿನಿಧಿಗಳಿಲ್ಲದೆ ಕಳೆದ ಮೂರು ಬಾರಿಯೂ ಅಧಿಕಾರಿಗಳಿಂದಲೇ ಮಂಡನೆಯಾಗಿರುವ ಬಿಬಿಎಂಪಿ ಬಜೆಟ್‍ನ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒಪ್ಪಿಗೆ ದೊರೆತ ಕೂಡಲೆ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.

ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ನಗರದ ನಾಗರೀಕರ ಮನ ಗೆಲ್ಲಲು ಬಿಬಿಎಂಪಿ ಬಜೆಟ್‍ನಲ್ಲಿ ಇನ್ನಿಲ್ಲದ ಕಸರತ್ತು ನಡೆಸಲಾಗಿದ್ದು, ಈ ಬಾರಿ ಅಂದಾಜು 9 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಮೇಲಿನ ಚರ್ಚೆ ಇಂದು ಕೊನೆಗೊಳ್ಳಲಿದ್ದು, ನಾಳೆ ಡಿಸಿಎಂ ಶಿವಕುಮಾರ್ ಅವರು ಬಿಬಿಎಂಪಿ ಬಜೆಟ್ ಪ್ರತಿಯನ್ನು ಪರಿಶೀಲಿಸಿ ಓಕೆ ನೀಡಿದ ನಂತರ ಬಿಬಿಎಂಪಿ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ.

ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿರುವುದರಿಂದ ಮಾ.5ರೊಳಗೆ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಮೂಲಗಳು ಈ ಸಂಜೆಗೆ ತಿಳಿಸಿವೆ. ರಾಜ್ಯ ಸರ್ಕಾರ ತನ್ನ ಬಜೆಟ್‍ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 3 ಸಾವಿರ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿ 6000 ಸಾವಿರ ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹದ ಗುರಿ ನೀಡಿರುವುದರಿಂದ ಈ ಬಾರಿ ಸರಿಸುಮಾರು 9 ಸಾವಿರ ಕೋಟಿ ರೂ.ಗಳ ಅಜುಬಾಜಿನ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

ಸಾರಾಯಿ ನಿಷೇಧದಿಂದ ಸಂಕಷ್ಟಪೀಡಿತ ಕುಟುಂಬಗಳಿಗೆ ನೆರವಿಗೆ ಒತ್ತಾಯ

ಹೀಗಾಗಿ ಫೆ.29 ಇಲ್ಲವೇ ಮಾ.4 ರಂದು ಬಿಬಿಎಂಪಿ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ. ಎಸ್‍ಎಎಸ್ ಆಸ್ತಿ ತೆರಿಗೆ ಪದ್ಧತಿಗೆ ಕೊಕ್ ಸಾಧ್ಯತೆ: ನಗರದಲ್ಲಿ ಇದುವರೆಗೂ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿತ್ತು. ಆದರೆ, ನಾಗರೀಕರು ತಮ್ಮ ನಿಜವಾದ ಆಸ್ತಿ ಅಳತೆ ಮುಚ್ಚಿಟ್ಟು ತಪ್ಪು ಅಳತೆ ಆಧಾರದ ಮೇಲೆ ಆಸ್ತಿ ತೆರಿಗೆ ಪಾವತಿಸಿಕೊಂಡು ಬಂದಿರುವುದರಿಂದ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮುಂದಿನ ಬಿಬಿಎಂಪಿ ಬಜೆಟ್‍ನಲ್ಲಿ ಎಸ್‍ಎಎಸ್ ಆಸ್ತಿ ತೆರಿಗೆ ಪದ್ಧತಿಗೆ ತೀಲಾಂಜಲಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ರೌಡಿಗಳ ಅಟ್ಟಹಾಸ ಅಡಗಿಸಲು ಇಲಾಖೆ ಸಮರ್ಥವಾಗಿದೆ: ಗೃಹ ಸಚಿವ ಪರಮೇಶ್ವರ್

ಎಸ್‍ಎಎಸ್ ಪದ್ಧತಿ ರದ್ದುಪಡಿಸಿ ಹೊಸ ತೆರಿಗೆ ನೀತಿ ಜಾರಿಗೊಳಿಸುವ ಮೂಲಕ ನಗರದಿಂದ ಸುಮಾರು 6 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಗ್ಯಾರಂಟಿ ಭರವಸೆಯಲ್ಲಿ ತೇಲಾಡುತ್ತಿರುವ ರಾಜ್ಯ ಸರ್ಕಾರ ಮುಂದಿನ ಲೋಕಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಗರದ ನಾಗರೀಕರು ಖುಷಿ ಪಡುವಂತಹ ಬಿಬಿಎಂಪಿ ಬಜೆಟ್ ಮಂಡನೆಗೆ ತಯಾರಿ ನಡೆಸಿದೆ ಎಂದು ಮೂಲಗಳು ವಿವರಿಸಿವೆ.

RELATED ARTICLES

Latest News