ಕಾರವಾರ ಫೆ.24: ರಾಜ್ಯ ಸರ್ಕಾರ ದಿವಾಳಿಯಾಗಿದ್ದು ,ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಾಗ್ದಾಳಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳಿಗೆ, ಶಾಸಕರಿಗೆ ಅನುದಾನ ಕೊಡಲು ಹಣ ಇಲ್ಲ ಅಂತಾರೆ. ಹಿಂದುಳಿದವರು, ಎಸ್‍ಸಿ, ಎಸ್‍ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ಲೂಟಿ ಹೊಡೆದು, ದಿವಾಳಿ ಮಾಡಿ, ಮತ ಪಡೆಯಲು ಹೊರಟಿದ್ದಾರೆ. ಇಂತಹ ದರಿದ್ರ ಸರ್ಕಾರ ನಾನೆಲ್ಲೂ ನೋಡಿಲ್ಲ. ನಮಗೆ ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ತಮಿಳುನಾಡು, ಆಂಧ್ರ, ಕೇರಳಕ್ಕೆ ಇಲ್ಲದ ವೇದನೆ ಇವರಿಗೆ ಏಕೆ?ಅವರಿಗೆ ಎಲ್ಲವೂ ಸರಿಹೋಗುತ್ತಿದೆ. ಸಿದ್ದರಾಮುಲ್ಲ ಖಾನ್‍ಗೆ ಏಕೆ ತೊಂದರೆ? ಎಂದು ಪ್ರಶ್ನಿಸಿದ್ದಾರೆ.
ಚರ್ಚೆಯಿಲ್ಲದೆ ವಿಧಾನಸಭೆಯಲ್ಲಿ 2 ವಿಧೇಯಕಗಳ ಅಂಗೀಕಾರ
ಶೇ ಶೇ.99 ರಷ್ಟು ಹಿಂದೂಗಳು ತೆರಿಗೆ ಕಟ್ಟುತ್ತಾರೆ. ನಮ್ಮ ಹಣ ತೆಗೆದುಕೊಂಡು ಹೋಗಿ ಮಸೀದಿ, ಚರ್ಚ್‍ಗೆ ಏಕೆ ನೀಡಿದ್ದೀರಿ? ನಮ್ಮ ತೆರಿಗೆ ಹಣ ನಮಗೆ ನೀಡಿ. ರಾಜ್ಯದ ದೇವಸ್ಥಾನಗಳ ಜೀರ್ಣೂದಾರಕ್ಕೆ ಹಣ ನೀಡಲು ಸರ್ಕಾರದಲ್ಲಿ ದುಡ್ಡಿಲ್ಲ. ಆದರೆ ಮಸೀದಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ದುಡ್ಡಿದೆ ಎಂದು ಕಿಡಿಕಾರಿದರು.
ಹಿಂದೂಗಳು ಕಟ್ಟಿರುವ ತೆರಿಗೆ ಹಣದಿಂದ ರಾಜ್ಯ ಸರ್ಕಾರ ನಡೆಯುತ್ತಿದೆ. ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು ಅಂತಾ ನಾವು ಕುಳಿತರೇ ಸ್ಥಿತಿ ಏನಾಗುತ್ತೆ? ಸಣ್ಣಬುದ್ಧಿ ಮಾಡಲ್ಲ, ಹಿಂದೂ ಸಮಾಜದ ಬಗ್ಗೆ ಹೇಳುವವರು, ಕೇಳುವವರು ಇಲ್ಲವಾ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಗೆ ವೋಟು ಕೊಡುವವರು ಧರ್ಮಕ್ಕಾಗಿ ಕೊಡುತ್ತಾರೆ. ಒಂದು ಸಾವಿರ ವರ್ಷದಿಂದ ನಮ್ಮ ಮೇಲೆ ಯಾರು ದಬ್ಬಾಳಿಕೆ ನಡೆಸುತ್ತಿದ್ದರೂ, ಅದಕ್ಕೆ ಪ್ರತಿಯಾಗಿ ರಾಮಮಂದಿರ ಕಟ್ಟಿ ನಿಲ್ಲಿಸಿದ್ದೇವೆ. ಪಂಜಾಬ್ ಗಡಿತಲ್ಲಿ ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡುತ್ತಾರೆ. ಇಡೀ ದೇಶದಲ್ಲಿ ಇಲ್ಲದಿರುವ ಗಲಾಟೆ, ಅನ್ಯಾಯ ಅವರಿಗೇನಾಗಿದೆ? ರೈತರ ಹೋರಾಟವಲ್ಲ, ಖಲಿಸ್ತಾನಿಗಳ ಹೋರಾಟ ಎಂದು ದೂರಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದರು.
ಪ್ತಧಾನಿ ಮೋದಿಯವರ ಕೆಲಸ ನೋಡಿ ಎಷ್ಟೋ ದೇಶಗಳು ಅವರನ್ನು ಕೊಂಡಾಡುತ್ತಿವೆ. ಅಷ್ಟೇ ಹೊಟ್ಟೆ ಕಿಚ್ಚು ಪಡುವವರೂ ಇದ್ದಾರೆ. ಇದಕ್ಕೆಲ್ಲೆ ಮುಕ್ತಿ ಬೇಕಂದರೆ ದೇಶದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.