Friday, December 13, 2024
Homeರಾಷ್ಟ್ರೀಯ | Nationalದರೋಡೆಕೋರರಿಂದ ವ್ಯಕ್ತಿಯ ಕೊಲೆ

ದರೋಡೆಕೋರರಿಂದ ವ್ಯಕ್ತಿಯ ಕೊಲೆ

ನವದೆಹಲಿ, ಫೆ.24: ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದ ಉದ್ಯಾನವನದಲ್ಲಿ ತಡ ರಾತ್ರಿ ನಾಲ್ವರು ದರೋಡೆಕೋರರ ಗುಂಪು ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ನರೇಂದ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧು ವಿಹಾರ್‍ನ ಸಿಎನ್‍ಜಿ ಗ್ಯಾಸ್ ಸ್ಟೇಷನ್ ಬಳಿಯ ಡಿಡಿಎ ಪಾರ್ಕ್‍ನಲ್ಲಿ ನರೇಂದ್ರ ಮತ್ತು ಸ್ನೇಹಿತ ಮದ್ಯ ಸೇವಿಸುತ್ತಿದ್ದಾಗ ನಾಲ್ವರು ಬಂದು ಆತನ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಸಿದು ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ. ತೀವರವಾಗಿ ಗಾಯಗೊಂಡ ನರೇಂದ್ರನನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಚಿನ್ನ -ಬೆಳ್ಳಿ ಅಂಗಡಿ ಮಾಲೀಕರಿಗೆ ಅನಗತ್ಯ ಕಿರುಕುಳ ನೀಡಬೇಡಿ

ಮಧು ವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದುದಾಳಿಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News