Monday, May 6, 2024
Homeರಾಜ್ಯಚಿನ್ನ -ಬೆಳ್ಳಿ ಅಂಗಡಿ ಮಾಲೀಕರಿಗೆ ಅನಗತ್ಯ ಕಿರುಕುಳ ನೀಡಬೇಡಿ

ಚಿನ್ನ -ಬೆಳ್ಳಿ ಅಂಗಡಿ ಮಾಲೀಕರಿಗೆ ಅನಗತ್ಯ ಕಿರುಕುಳ ನೀಡಬೇಡಿ

ಬೆಂಗಳೂರು ಫೆ.23- ಚಿನ್ನ ಬೆಳ್ಳಿ ಆಭರಣ ಮಾಲೀಕರಿಗೆ ಹಾಗೂ ಗಿರವಿ ಅಂಗಡಿಯವರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಸಂಬಂಧಪಟ್ಟ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆಭರಣ ತಯಾರು ಮಾಡುವವರಿಗೆ ಅನಗತ್ಯವಾಗಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ. ನಾಳೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಇದೆ. ಈ ಸಂದರ್ಭದಲ್ಲಿ ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಅನಗತ್ಯವಾಗಿ ಪೊಲೀಸರು ಕಿರುಕುಳ ನೀಡುವುದಿಲ್ಲ ಎಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇನೆ. ಆಭರಣಗಳಲ್ಲಿ ವ್ಯತ್ಯಾಸವಾದಾಗ ಗ್ರಾಹಕರು ದೂರು ನೀಡುತ್ತಾರೆ. ಇಲ್ಲವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಬೇಕು ಎಂದಾಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುತ್ತಾರೆ. ಆದರೂ ಸದಸ್ಯರ ಕಳಕಳಿಯನ್ನು ಅರ್ಥಮಾಡಿಕೊಂಡು ಅವರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದಾಗಿ ಹೇಳಿದರು.

ವೀಲಿಂಗ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ : ಸವಾರ ಪೊಲೀಸ್ ವಶಕ್ಕೆ

ಇದಕ್ಕೂ ಮುನ್ನ ಮಾತನಾಡಿದ ಶರವಣ, ಚಿನ್ನ ಬೆಳ್ಳಿ ಆಭರಣ ಅಂಗಡಿ ಮಾಲೀಕರ ಮೇಲೆ ದಿನೇ ದಿನೇ ದೌರ್ಜನ್ಯ ಹೆಚ್ಚುತ್ತಲೇ ಇದೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕೆಂದು ಶರವಣ ಮನವಿ ಮಾಡಿದರು.
ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ಮಾಡುವ ಮೊದಲೇ, ಅಂಗಡಿ ಮಾಲೀಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರಿಗೂ ಸ್ವಾಭಿಮಾನವಿದೆ, ಬದುಕುವ ಹಕ್ಕಿದೆ ಅದಕ್ಕೆ ಭಂಗ ಮಾಡದೆ. ಅವರಿಗೆ ಕಿರುಕುಳ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಟಿ. ಎ. ಶರವಣ ಅವರು ಗೃಹಮಂತ್ರಿಗಳನ್ನು ಕೈಮುಗಿದು ಮನವಿ ಮಾಡಿಕೊಂಡರು.

RELATED ARTICLES

Latest News