ತುಂಬಾ ಪ್ರೀತಿ ಮಾಡೋ ಪ್ರೇಮಿಗಳು ತಮ್ಮ ಎರಡು ಕುಟುಂಬಗಳಿಗೆ ತಿಳಿಸದಂತೆ ವಿವಾಹವಾಗಿ ನಂತರ ಎರಡು ಕಡೆಯಿಂದ ಒಪ್ಪೆಗೆ ಸಿಕ್ಕಮೇಲೆ ಮತ್ತೆ ಮದವುವೆಯಾಗುವ ಕಥಾತಿರಳಿನ ಚಿತ್ರ ಫಾರ್ ರಿಜಿಸ್ಟ್ರೇಷನ್. ಇವರ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿರುವ ವಿಚಿತ್ರ ಬೇರೊಂದು ಕೋನದಲ್ಲಿ ಪ್ರೇಕ್ಷರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ನವೀನ್ ದ್ವಾರಕನಾಥ್, ಸಮಾಜದಲ್ಲಿ ಬದುಕಬೇಕಾದರೆ ನಮಗೆ ನಾವು ಬದುಕುವುದಲ್ಲ ನೆರೆಹೊರಿಯವರನ್ನು ಗಮನದಲ್ಲಿಟ್ಟುಕೊಂಡು ಜೀವಿಸಬೇಕು, ಇಲ್ಲ ಅಂದ್ರೆ ಅವರ ಅವತಾರಗಳು, ಅವಾಂತರಗಳು ಬೇರೆಯವರ ಜೀವನದಲ್ಲಿ ಎಷ್ಟೊಂದು ಗೋಜಲುಗಳನ್ನ ತಂದುಡ್ಡುತ್ತವೆ ಎನ್ನುವುದಕ್ಕೆ ಸಾಕ್ಷಿಕರಿಸಿ ಪರದೆಯ ಮೇಲೆ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ.
ನಾಯಕ ನಾಯಕಿ ಇಬ್ಬರು ಇಷ್ಟಪಟ್ಟು ಆದ ವಿವಾಹ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ಇದರ ಕಾರಣಗಳೇ ಕಥೆಯನ್ನ ಗಟ್ಟಿಗೊಳಿಸಿರುವುದು. ಹಾಗೆ ಲೇಹ ಮಾರುವ ಕಂಪನಿಯಲ್ಲಿ ಕೆಲಸ ಮಾಡುವ ನಾಯಕ. ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಕಥೆಯಲ್ಲಿ ಈ ಭಾಗವೂ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡು, ಇದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡಿರುವ ನಿರ್ದೇಶಕ ಎಮೋಷನಲ್ ಜರ್ನಿಯನ್ನು ಮುಂದುವರೆಸಿದ್ದಾರೆ. ನಾಯಕ ಪೃಥ್ವಿ ಅಂಬಾರ್ ಮತ್ತು ನಾಯಕಿ ಮಿಲನ ನಾಗರಾಜ್ ಕಥೆಯುದ್ಧಕ್ಕೂ ಎಲ್ಲರನ್ನು ಅಭಿನಯದ ಮೂಲಕ ಸೆಳೆಯುವಲ್ಲಿ ಸಾಫಲ್ಯ ಕಂಡಿದ್ದಾರೆ.
ಒಂದೇ ಕಟ್ಟಡದ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುವ ನಾಯಕ,ನಾಯಕಿಯ ಪ್ರೀತಿಯೋಂದಿಗೆ ಪ್ರಾರಂಭವಾಗುವ ಸ್ಕ್ರೀನ್ ಪ್ಲೇ ಎಲ್ಲಾ ದಿಕ್ಕುಗಳನ್ನ ಪ್ರದರ್ಶನ ಮಾಡುತ್ತದೆ, ಚಿತ್ರದ ಮೊದಲರ್ಧ,ಚಿಕ್ಕ ಚಿಕ್ಕ ಸಂಭಾಷಣೆಗಳು ನಗೆಗಡಲಲ್ಲಿ ತೇಲಿಸುವಂತೆ ಮಾಡಿದೆ.ದ್ವಿತೀಯಾರ್ಧದಲ್ಲಿ ಒಂದಷ್ಟು ಗಂಭೀರ ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.
ನಿರ್ದೇಶಕ ನವೀನ್ ದ್ವಾರಕನಾಥ್ ಹೊಸತನದ ಕಥೆಯೊಂದಿಗೆ ರಂಜಿಸುವ ಕೆಲಸ ಮಾಡಿದ್ದಾರೆ. ಸುಧಾ ಬೆಳವಾಡಿ, ಸ್ವಾತಿ, ರವಿಶಂಕರ್, ಸಿಹಿ ಕಹಿ ಚಂದ್ರು, ಎಂ.ಎಸ್ ಉಮೇಶ್, ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಮತ್ತಿತರರು ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಸಿನಿಮಾಗಳಲ್ಲಿ ಹೊಸತನ ಬಯಸುವವರಿಗೆ ಈ ಚಿತ್ರ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ